ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ಮೂಡು ತೋಟ ಶ್ರೀ ದೈವರಾಜ ಕೋಡ್ದಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಜರುಗಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಗ್ಗೆ ಚಪ್ಪರ ಮುಹೂರ್ತ, ಮಧ್ಯಾಹ್ನ 3:00 ಗಂಟೆಗೆ ಚಪ್ಪರ ಏರುವುದರ ಜೊತೆಗೆ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು. ಸಂಜೆ ಪುನೋಡಿ ಭಂಡಾರ ಮನೆಯಿಂದ ಪಡುಪಣಂಬೂರು ಅರಮನೆಗೆ ದೈವಗಳ ಭಂಡಾರ ಹೊರಟು, ದೈವಸ್ಥಾನಕ್ಕೆ ಆಗಮಿಸಿತು. ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ, ದೈವ- ದೇವರ ಆರಾಧನೆಯಿಂದ ಕಷ್ಟಗಳು ದೂರವಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ. ಇಡೀ ವಿಶ್ವವೇ ಕೊರೊನಾ ಮಹಾಮಾರಿಯಿಂದ ತತ್ತರಿಸುತ್ತಿದ್ದು, ಶೀಘ್ರ ಕಷ್ಟಗಳೆಲ್ಲ ದೂರವಾಗಿ ಶಾಂತಿ ನೆಲೆಸಲಿ ಎಂದರು.
ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಅನಿಲ್ ಶ್ಯಾಮ್ ಶೆಟ್ಟಿ, ರಮೇಶ್ ಶೆಟ್ಟಿ ಮಾಗಂದಡಿ, ಶಿವರಾಮ ಎಸ್. ಶೆಟ್ಟಿ ಬಾಳಿಕೆಮನೆ, ಗೌರವ ಸಲಹೆಗಾರ ಮುಲ್ಕಿ ಅರಮನೆಯ ಗೌತಮ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಧೂಮಾವತಿ, ಬಂಟ, ಗುಳಿಗ ದೈವಗಳ ನೇಮೋತ್ಸವ ನಡೆಯಿತು.
Kshetra Samachara
10/01/2021 12:14 pm