ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಾಂಡೇಶ್ವರ ದೇಗುಲ ಬ್ರಹ್ಮಕಲಶೋತ್ಸವ ದಲ್ಲಿ ಪೊಲೀಸ್ ಕಮಿಷನರ್ ಭಕ್ತಿಗಾನ ಸುಧೆ...

ಮಂಗಳೂರು: ನಗರ ನೂತನ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪ್ರತಿನಿತ್ಯ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿರುತ್ತಾರೆ. ಇದಕ್ಕೆ ಹೊಸ ಸೇರ್ಪಡೆ ಹಾಡುಗಾರಿಕೆ.

ಪೊಲೀಸ್ ಕಮಿಷನರ್ ಅವರು ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನಿನ್ನೆ ಸುಶ್ರಾವ್ಯವಾಗಿ ಭಕ್ತಿಗೀತೆ ಹಾಡಿ ಗಮನ ಸೆಳೆದಿದ್ದಾರೆ.

ಕೆಲವು ದಿನಗಳ ಹಿಂದೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದ ಶಶಿ ಕುಮಾರ್‌, ನಗರ ಕಾನೂನು ಸುವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಂಡಿದ್ದರು.

ಅಧಿಕಾರ ಸ್ವೀಕರಿಸಿದ ಮರುದಿನವೇ ರಾತ್ರಿ ಕಾರ್ಯನಿಮಿತ್ತ ಮೂಡುಬಿದಿರೆಗೆ ಹೋಗಿದ್ದ ಕಮಿಷನರ್ ತಡರಾತ್ರಿ ಮರಳಿ ಬರುವಾಗ ಕುಲಶೇಖರ ಬಳಿ ಹತ್ತು ಸಮಸ್ತರ ಪರವಾಗಿ ನಡೆಯುತ್ತಿದ್ದ "ಶ್ರೀ ದೇವಿ ಮಹಾತ್ಮೆ" ಯಕ್ಷಗಾನಕ್ಕೆ ತೆರಳಿ ಸಾರ್ವಜನಿಕರ ಮಧ್ಯೆ ಕುಳಿತು 2 ಗಂಟೆವರೆಗೆ ಯಕ್ಷಗಾನ ವೀಕ್ಷಿಸಿದ್ದರು. ಸಂಘಟಕರಿಗೆ ಸುಮಾರು ಹೊತ್ತಿನ ತನಕ ಕಮಿಷನರ್ ಅವರು ಯಕ್ಷಗಾನ ವೀಕ್ಷಿಸುತ್ತಿರುವುದು ಗೊತ್ತೇ ಇರಲಿಲ್ಲ.

ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಾತ್ರಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಅಲ್ಲಿಗೆ ರಾತ್ರಿ 10 ಗಂಟೆ ವೇಳೆಗೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಬಳಿ ತೆರಳಿ ವೀಕ್ಷಿಸುತ್ತಿದ್ದರು.

ಈ ವೇಳೆ ಕಮಿಷನರ್ ಅವರು ಒಳ್ಳೆಯ ಹಾಡುಗಾರರು ಎಂದು ತಿಳಿದ ಸಂಘಟಕರು ವೇದಿಕೆಗೆ ಹಾಡಿಗಾಗಿ ಆಹ್ವಾನಿಸಿದರು. ಆಗ ಭಕ್ತಿ ಪೂರ್ವಕವಾಗಿಯೇ ಆಹ್ವಾನ ಸ್ವೀಕರಿಸಿದ ಪೊಲೀಸ್ ಕಮಿಷನರ್ ಅವರು "ಪವಮಾನ ಪವಮಾನ ಜಗದ ಪ್ರಾಣ.. ಸಂದರುಶನ..." ಎಂಬ ಭಕ್ತಿಗೀತೆ ಹಾಡಿ ಭಕ್ತಾದಿಗಳ ಮನರಂಜಿಸಿದರು.

Edited By : Manjunath H D
Kshetra Samachara

Kshetra Samachara

09/01/2021 11:40 am

Cinque Terre

21.39 K

Cinque Terre

17

ಸಂಬಂಧಿತ ಸುದ್ದಿ