ಮುಲ್ಕಿ: ಮುಲ್ಕಿ ಬಳಿಯ ಪುನರೂರು ಶ್ರೀ ಕುಜಿಂಗಿರಿ ರಕ್ತೇಶ್ವರಿ ದೇವಸ್ಥಾನದಲ್ಲಿ "ಶ್ರೀ ಮದಷ್ವಥ ಪ್ರತಿಷ್ಠೆ ಯುವ ವಿವಾಹಾಂತ ಸಂಸ್ಕಾರಗಳು" ಸಹಿತ ನಾನಾ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಬುಧವಾರ ದೇವತಾ ಪ್ರಾರ್ಥನೆ, ಸಪ್ತಶುದ್ದಿ, ಸ್ವಸ್ತಿ ಪುಣ್ಯಾಹ ವಾಚನ, ರಾಕ್ಷೋಘ್ನ ಹೋಮ, ವಾಸ್ತು ಪ್ರಕ್ರಿಯೆ, ದಿಕ್ಪಾಲಕ ಬಲಿ, ಕಾಕೋಚ್ಚಿಷ್ಟ ಶಾಂತಿ, ಪೂರ್ವಕ ಅದಿವಾಸ ವಿಧಿ ರಕ್ಷೆ ನಡೆಯಿತು.
ಗುರುವಾರ ಬೆಳಿಗ್ಗೆ ಪುಣ್ಯಾಹ ವಾಚನ,ನಾಂದಿ ಸಮಾರಾಧನೆ ಪ್ರಾಯಶ್ಚಿತ ಹೋಮಗಳು,ಶ್ರೀಮದಷ್ವಥ ಪ್ರತಿಷ್ಠೆ, ವಿವಾಹಾಂತ ಸಂಸ್ಕಾರಗಳು, ವಿಷ್ಣು ಯಾಗ, ದಂಪತಿ ಆರಾಧನೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ಮಾತನಾಡಿ, ಭಗವಂತನ ಆರಾಧನೆಯಿಂದ ಲೋಕಕಲ್ಯಾಣವಾಗುವುದರ ಜೊತೆಗೆ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು, ಪುನರೂರು ಶ್ರೀ ವಿಶ್ವನಾಥ ದೇವಳದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಶ್ರೀ ಕುಜಿಂಗಿರಿ ದೇವಸ್ಥಾನದ ಆಡಳಿತ ಮೊಕ್ತೇಸರ ಪುರಂದರ ಡಿ. ಶೆಟ್ಟಿಗಾರ್, ಕಡಂದಲೆ ಕೃಷ್ಣಭಟ್, ಅನಂತರಾಜ ಭಟ್ ಹೆಜಮಾಡಿ, ಸುಬ್ರಹ್ಮಣ್ಯ ಭಟ್ ತೋಕೂರು, ವಿಶ್ವನಾಥ ರಾವ್ ಪುನರೂರು, ರವಿ ಶೆಟ್ಟಿ ಪುನರೂರು, ಗೋಪಿನಾಥ ರಾವ್ ಪುನರೂರು, ಉಷಾ ಹರಿಕೃಷ್ಣ ಪುನರೂರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
31/12/2020 04:26 pm