ಮಂಗಳೂರು: ಹರಿಪಾದಗೈದಿರುವ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣಾರ್ಥ ಕಲ್ಕೂರ ಪ್ರತಿಷ್ಠಾನದಿಂದ 'ಪೇಜಾವರ ವಿಶ್ವೇಶತೀರ್ಥ ನಮನ-೨೦೨೦' ಕಾರ್ಯಕ್ರಮ ಕದ್ರಿ ಮಲ್ಲಿಕಾ ಬಡವಾಣೆಯ ಮಂಜು ಪ್ರಾಸಾದದ ವಾದಿರಾಜ ಮಂಟಪದಲ್ಲಿ ನಡೆಯಿತು.
ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಉಪಸ್ಥಿತರಿದ್ದು ಪುಷ್ಪನಮನ ಸಲ್ಲಿಸಿ ಬಳಿಕ ಅನುಗ್ರಹ ಭಾಷಣ ಮಾಡಿದರು ಈ ಸಂದರ್ಭ “ಗುರುವಂದನೆ”, ಸಾಧಕ ಶ್ರೇಷ್ಠರಿಗೆ, ’ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ’ ಪ್ರದಾನ ಹಾಗೂ ನುಡಿನಮನ ಸಲ್ಲಿಸಲಾಯಿತು.
ರಾಜಪುರೋಹಿತ ವೇ. ಮೂ ಶ್ರೀ ಗಣಪತಿ ಅಚಾರ್ಯ ಕದ್ರಿ, ತುಳು ಜನಪದ ಸಾಹಿತಿ ಪ್ರಾಧ್ಯಾಪಕ ಡಾ. ಗಣೇಶ್ ಅಮೀನ್ ಸಂಕಮಾರ್ ಹಾಗೂ ಖ್ಯಾತ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ ವಿಶ್ವೇಶತೀರ್ಥ ಶ್ರೀಪಾದಂಗಳವರ “ಸಂಸ್ಮರಣಾ” ಭಾಷಣ ಮಾಡಿದರು.
ಕೋವಿಡ್-೧೯ರ ಸರಕಾರದ ನಿಯಮಾನುಸಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶೀಲಾದಿವಾಕರ್ ಬಳಗದವರಿಂದ ಶಾಸ್ತ್ರೀಯ ಸಂಗೀತ ಹಾಗೂ ಸತ್ಸಂಗ ನೇರವೇರಿತು.
Kshetra Samachara
29/12/2020 10:09 pm