ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: 'ಹೊಸ ಅಂಗಣ'ದಿಂದ "ತಿಂಗಳ ಬೆಳಕು"

ಮುಲ್ಕಿ: ಹೊಸ ಅಂಗಣ ಮಾಸಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ ಮುಲ್ಕಿಯಲ್ಲಿ ನಡೆಯಿತು.

ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಜೀವವನ್ನು ಪಣಕ್ಕಿಟ್ಟು ನಿರ್ಗತಿಕರನ್ನು,

ಶೋಷಿತರನ್ನು ತಮ್ಮ ಆಶ್ರಮದಲ್ಲಿ ರಕ್ಷಿಸಿ ಸೇವೆ ಮಾಡುವ ಕಾರ್ನಾಡು ಮೈಮುನಾ ಫೌಂಡೇಶನ್ ಆಪದ್ಬಾಂಧವ ಆಸಿಫ್ ಅವರಿಗೆ ಸನ್ಮಾನ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಲ್ಕಿ ಜೇಸಿ ಅಧ್ಯಕ್ಷ ದಿನೇಶ್ ಶೆಟ್ಟಿ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಕೊಕ್ಕರಕಲ್, ರಾಷ್ಟ್ರೀಯ ಬಿಲ್ಲವರ ಮಂಡಲ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು,

ಉದ್ಯಮಿ ವಾಸು ಪೂಜಾರಿ ಚಿತ್ರಾಪು, ವಾಮನ ಕೋಟ್ಯಾನ್ ನಡಿಕುದ್ರು,ಹೊಸ ಅಂಗಣ ಪತ್ರಿಕೆಯ ಸಂಪಾದಕ ಡಾ. ಹರಿಶ್ಚಂದ್ರ ಪಿ.ಸಾಲಿಯಾನ್,

ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ರಜಾಕ್ , ಪುರಂದರ ಸಾಲ್ಯಾನ್, ರವಿಚಂದ್ರ ರಾವ್, ಹರಿಷ್ ಕೊಳಚಿಕಂಬಳ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹೊಸ ಅಂಗಣ ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು ಹಾಗೂ ಆಪತ್ಬಾಂಧವ, ಸಾಮಾಜಿಕ ಕಾರ್ಯಕರ್ತ

ಕಾರ್ನಾಡು ಮೈಮುನಾ ಫೌಂಡೇಶನ್ ನಿರ್ದೇಶಕ ಆಸಿಫ್ ಅವರನ್ನು ಗೌರವಿಸಲಾಯಿತು. ಡಾ.ಹರಿಶ್ಚಂದ್ರ ಸಾಲ್ಯಾನ್ ಸ್ವಾಗತಿಸಿದರು. ರವಿಚಂದ್ರ ನಿರೂಪಿಸಿದರು.

Edited By : Manjunath H D
Kshetra Samachara

Kshetra Samachara

29/12/2020 10:44 am

Cinque Terre

12.99 K

Cinque Terre

0

ಸಂಬಂಧಿತ ಸುದ್ದಿ