ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಶ್ರೀ ಜಗನ್ನಾಥ ದಾಸರ ಆರಾಧನೆ, ಮೆಟ್ಟಿಲೋತ್ಸವ; ಶ್ರೀ ವಿಶ್ವಪ್ರಿಯತೀರ್ಥರು ಭಾಗಿ

ಕಾಪು: ಇಲ್ಲಿನ ಕುಂಜಾರುಗಿರಿ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜಗನ್ನಾಥ ದಾಸರ ಆರಾಧನೆ ಪ್ರಯುಕ್ತ ಮೆಟ್ಟಿಲೋತ್ಸವ ನಡೆಯಿತು.

ಆಚಾರ್ಯ ಮಧ್ವರ ಅವತಾರ ಭೂಮಿ ಪಾಜಕಕ್ಷೇತ್ರದಲ್ಲಿ ಪ್ರಾರ್ಥನೆ ನಡೆಸಿ, ಜಗನ್ನಾಥ ದಾಸರ ಭಾವಚಿತ್ರಕ್ಕೆ ಮಂಗಳಾರತಿ ಬೆಳಗಿ ಪುಷ್ಪಾರ್ಚನೆ ಮಾಡುವ ಮೂಲಕ ಉತ್ಸವಕ್ಕೆ ಶ್ರೀಪಾದರು ಚಾಲನೆ ನೀಡಿದರು.

ಪಾಜಕ ಕ್ಷೇತ್ರದಿಂದ ಕುಂಜಾರುಗಿರಿ ದೇವಸ್ಥಾನದವರೆಗೆ ನಡೆದ ಉತ್ಸವದಲ್ಲಿ 18 ಭಜನಾ ಮಂಡಳಿಗಳು ಪಾಲ್ಗೊಂಡಿದ್ದವು. ಕುಂಜಾರುಗಿರಿ ದೇವಸ್ಥಾನದ ಪಶ್ಚಿಮ ಭಾಗದ ಮೆಟ್ಟಿಲಿನಲ್ಲಿರುವ ಗೋಪುರದ ಕೆಳಗೆ ದೇವರನ್ನಿರಿಸಿ ಪೂಜೆ ನಡೆಸಿ ಭಜನೆ ಮಾಡುವ ಮೂಲಕ ಮೆಟ್ಟಿಲುಗಳನ್ನೇರಿ ದೇವಸ್ಥಾನದಲ್ಲಿ ಮಂಗಳ ಹಾಡಲಾಯಿತು.

ಈ ಕಾಲಘಟ್ಟದಲ್ಲಿಯೂ ಯುವಜನರು ಭಜನಾ ತಂಡಗಳನ್ನು ರಚಿಸಿ ಸೇವೆ ಮಾಡುತ್ತಿರುವುದು ಸ್ತುತ್ಯಾರ್ಹ. ಇಂತಹ ಕಾರ್ಯಕ್ರಮಗಳು ನಿರಂತರ ನಡೆದು ದೇಶಕ್ಕೆ ಸುಭಿಕ್ಷೆಯಾಗಲಿ ಎಂದು ಶ್ರೀಗಳು ಅನುಗ್ರಹ ಸಂದೇಶ ನೀಡಿದರು.

Edited By : Manjunath H D
Kshetra Samachara

Kshetra Samachara

07/09/2022 01:58 pm

Cinque Terre

2.48 K

Cinque Terre

0

ಸಂಬಂಧಿತ ಸುದ್ದಿ