ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆಯ ಗಣೇಶ ಚತುರ್ಥಿಯಲ್ಲಿ ಹುಲಿಗಳ ಅಬ್ಬರ,

ಮೂಡುಬಿದಿರೆ : ಕರಾವಳಿ ಭಾಗದಲ್ಲಿ ಹಬ್ಬಗಳು ಆರಂಭವಾಯಿತೆಂದರೆ ಮೊದಲು ಎಲ್ಲಾರ ಕಣ್ಮಣ ಸೆಳೆಯುವುದೇ ಹುಲಿವೇಷ. ಈ ಹುಲಿವೇಷ ನೋಡಲೆಂದೇ ಮುಗಿ ಬೀಳುವ ಪ್ರೇಕ್ಷಕರೇ ಹೆಚ್ಚು.

ಮೂಡುಬಿದಿರೆಯ ಸುಮಾರು 14 ವರುಷದಿಂದ ಹುಲಿವೇಷ ಪ್ರದರ್ಶನವನ್ನು ಮುಂದುವರಿಸಿಕೊಂಡು ಬಂದಿರುವ ತಂಡ ಸರ್ವೋದಯ ಫ್ರೆಂಡ್ಸ್ ಬೆದ್ರ. ಈ ತಂಡದ ಹುಲಿವೇಷ ಕುಣಿತದ ಝಲಕ್ ಇಲ್ಲಿದೆ ನೋಡಿ.

ಸರ್ವೋದಯ ಫ್ರೆಂಡ್ಸ್ ಈ ತಂಡವು ಮೊದಲು 3 ಸದಸ್ಯರನ್ನೊಳಗೊಂಡು ಹುಲಿವೇಷ ಪ್ರದರ್ಶನವನ್ನು ಆರಂಭಿಸಿದ್ದು, ವರುಷಗಳು ಉರುಳಿದಂತೆ ತಂಡದ ಸದಸ್ಯರ ಸಂಖ್ಯೆಯು ಹೆಚ್ಚುತ್ತಾ ಇದೀಗ 800 ಕ್ಕೂ ಅಧಿಕ ಸದಸ್ಯರು ತಂಡದಲ್ಲಿದ್ದಾರೆ. ಈ ಬಾರಿ ಹುಲಿವೇಷ ಕುಣಿತ ಪ್ರದರ್ಶನದಲ್ಲಿ 80ಹುಲಿಗಳು ಬಣ್ಣ ಹಚ್ಚಲಿದೆ.

ಇನ್ನು ಈ ಹುಲಿ ಕುಣಿತ ವೇಷ ಪ್ರದರ್ಶನಕ್ಕೂ ಮುನ್ನ ಊದು ಪೂಜೆ ಸಲ್ಲಿಸಿ ನಂತರ ಮೂಡುಬಿದಿರೆಯ ಶಕ್ತಿಶಾಲಿ ಹನುಮಾನ್ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಸಮಾಜ ಮಂದಿರದಲ್ಲಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಗಣಪನ ಆಶೀರ್ವಾದ ಪಡೆದು ಮೂಡುಬಿದಿರೆ ಪರಿಸರದಲ್ಲಿ ಆಯ್ದ ಸ್ಥಳಗಳಲ್ಲಿ ಹುಲಿ ಕುಣಿತ ಪ್ರದರ್ಶನ ಮಾಡಲಾಗುತ್ತದೆ.

ಒಟ್ಟಾರೆಯಲ್ಲಿ ಹುಲಿವೇಷ ಪ್ರದರ್ಶನವು ವೈಭವದ ಮೆರವಣಿಗೆಗೆ ಹೊಳಪನ್ನು ನೀಡುವುದಂತೂ ಸುಳ್ಳಲ್ಲ.

ಇನ್ನು ಈ ಬಾರಿ ಹುಲಿವೇಷ ಕುಣಿತ ಪ್ರದರ್ಶನದ ಜೊತೆಗೆ ಈ ಹನುಮಂತನ ಸ್ತಬ್ಧ ಚಿತ್ರವನ್ನು ಪ್ರದರ್ಶನ ಮಾಡುತ್ತಿದ್ದು, ಪ್ರತಿ ವರುಷ ಬೇರೆ-ಬೇರೆ ಸ್ತಬ್ಧ ಚಿತ್ರಗಳನ್ನು ಪ್ರದರ್ಶನ ಮಾಡುತ್ತಾ ಬಂದಿದೆ. ಈ ತಂಡವು ಇಂದು ಬಲಿಷ್ಠವಾಗಿ ಬೆಳೆದು ಮೂಡುಬಿದಿರೆ ಗಣೇಶೋತ್ಸವದ ಶೋಭಾಯಾತ್ರೆಗೆ ಉತ್ತಮ ಮೆರಗು ನೀಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಪಬ್ಲಕ್ ನೆಕ್ಸ್ಟ್ ವಿಷೇಶ ವರದಿ : ರಂಜಿತಾ ಮೂಡಬಿದಿರೆ

Edited By :
PublicNext

PublicNext

04/09/2022 04:13 pm

Cinque Terre

32.2 K

Cinque Terre

1

ಸಂಬಂಧಿತ ಸುದ್ದಿ