ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದರ ಆರಾಧನೆ - ಮೂಲ ವೃಂದಾವನಕ್ಕೆ ವಿಶೇಷ ಪೂಜೆ

ಉಡುಪಿ: ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದರ ಆರಾಧನೆ ಪ್ರಯುಕ್ತ ಅವರ ಮೂಲ ವೃಂದಾವನಕ್ಕೆ ವಿಶೇಷ ಪೂಜೆಯನ್ನು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ನಡೆಸಿದರು. ನಂತರ ಭೀಮನಕಟ್ಟೆ ಮಠಾಧೀಶರಾದ ಶ್ರೀ ರಘುವರೇಂದ್ರ ತೀರ್ಥ ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ ಗುರುಸಂಸ್ಮರಣಾ ಕಾರ್ಯಕ್ರಮ ನಡೆಯಿತು. ವಿದ್ವಾಂಸರಾದ ನಿಪ್ಪಾಣಿ ಶ್ರೀ ಗುರುರಾಜ ಆಚಾರ್ಯರು ಹಾಗೂ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ರತ್ನ ಕುಮಾರ್ ಗುರುಸಂಸ್ಮರಣೆಯನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಭೀಮನಕಟ್ಟೆ ಮಠದಿಂದ ಪ್ರಕಾಶನಗೊಂಡ ನಿಪ್ಪಾಣಿ ಗುರುರಾಜ ಆಚಾರ್ಯರು ಅನುವಾದಿಸಿದ ಶ್ರೀ ರಘುಪ್ರವೀರ ತೀರ್ಥರ ಸ್ವಾಪ್ನವೃಂದಾವನಾಖ್ಯಾನ ಪ್ರಾಮಾಣ್ಯ ಪ್ರಬೋಧನಮ್ ಎಂಬ ಪುಸ್ತಕವನ್ನು ಹಾಗೂ ಉತ್ತನೂರು ಶ್ರೀನಿಧಿ ಆಚಾರ್ಯರು ಸಂಪಾದಿಸಿದ ಸಚ್ಛವಣ ಭೂಷಣ ಎಂಬ ಕೃತಿಯನ್ನು ಯತಿತ್ರಯರು ಬಿಡುಗಡೆಗೊಳಿಸಿ ಆರಾಧನಾ ಸಂದೇಶ ನೀಡಿದರು.

Edited By : Nagaraj Tulugeri
Kshetra Samachara

Kshetra Samachara

03/09/2022 07:00 pm

Cinque Terre

3.04 K

Cinque Terre

0

ಸಂಬಂಧಿತ ಸುದ್ದಿ