ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: 'ಬಪ್ಪನಾಡು ಚಿಕ್ಕ ಮೇಳ' ಮಳೆಗಾಲದ ತಿರುಗಾಟ ಆರಂಭ

ಮುಲ್ಕಿ: ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಚಿಕ್ಕಮೇಳ ಶುಕ್ರವಾರದಿಂದ ಮಳೆಗಾಲದ ತಿರುಗಾಟ ಆರಂಭವಾಗಿದೆ.

ಮೇಳದ ವ್ಯವಸ್ಥಾಪಕ ವಿನೋದ್ ಕುಮಾರ್ ಬಜ್ಪೆ ಹಾಗೂ ಮ್ಯಾನೇಜರ್ ಭವಾನಿ ಶಂಕರ್ ನೇತೃತ್ವದಲ್ಲಿ ಕಲಾವಿದರಾದ ಮಾಧವ ಬಂಗೇರ ಕೊಳತ್ತಮಜಲು, ಪರಮೇಶ್ವರ ಗಂಗನಾಡು, ಹೆಬ್ರಿ ಗಣೇಶ್(ಭಾಗವತಿಕೆ) ರೋಹಿತ್ ಉಚ್ಚಿಲ (ಚಂಡೆ), ವಿಕಾಸ್(ಮದ್ದಳೆ)ಯಲ್ಲಿ ಭಾಗವಹಿಸುತ್ತಿದ್ದಾರೆ.

ಮಂಗಳೂರು ಸುರತ್ಕಲ್ , ಮುಲ್ಕಿ ಹೀಗೆ ಆಯ್ದ ಸ್ಥಳಗಳಲ್ಲಿ ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ ಚಿಕ್ಕಮೇಳದ ಮನೆ- ಮನೆ ತಿರುಗಾಟ ನಡೆಯಲಿದೆ.

ಕಲಾವಿದ ಮಾಧವ ಬಂಗೇರ ಕೊಳ್ತಮಜಲು " ಪಬ್ಲಿಕ್ ನೆಕ್ಸ್ಟ್" ಜೊತೆ ಮಾತನಾಡಿ, ಯಕ್ಷಗಾನ ಅಭಿಮಾನಿಗಳ ಪ್ರೋತ್ಸಾಹ ಕಲಾವಿದರ ಮೇಲೆ ಸದಾ ಇರಲಿ ಎಂದು ವಿನಂತಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

18/06/2022 09:56 pm

Cinque Terre

14.31 K

Cinque Terre

2

ಸಂಬಂಧಿತ ಸುದ್ದಿ