ಉಡುಪಿ: ನಾಳೆ ,ಮೇ 14 ರಂದು ರಾಜ್ಯದ ಮೂರೂ ಧರ್ಮದ ಧರ್ಮಗುರುಗಳು ರಾಜ್ಯದ ಜನತೆಗೆ ಸೌಹಾರ್ದ ಸಂದೇಶ ನೀಡುವುದರ ಜೊತೆಗೆ ಸಾಮರಸ್ಯ ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಮಾವೇಶದ ಸಂಚಾಲಕರಲ್ಲಿಬ್ಬರಾದ ,ದಲಿತ ಮುಖಂಡ ಸುಂದರ್ ಮಾಸ್ತರ್ ಹೇಳಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ,ರಾಜ್ಯದ ಸೌಹಾರ್ದತೆಗೆ ಧಕ್ಕೆ ಬಂದಾಗಲೆಲ್ಲ ಸೌಹಾರ್ದದ ಸಂದೇಶ ನೀಡುವುದು ಎಲ್ಲ ಧರ್ಮೀಯರ ಕರ್ತವ್ಯ.ಈ ನಿಟ್ಟಿನಲ್ಲಿ ಸರ್ವಧರ್ಮೀಯರು ನಾಳೆ ಸಾಮರಸ್ಯ ನಡಿಗೆಯಲ್ಲಿ ಭಾಗವಹಿಸುತ್ತಾರೆ.
ಬಳಿಕ ನಡೆಯಲಿರುವ ಸಮಾವೇಶದಲ್ಲಿ ಹಿಂದೂ ಧರ್ಮದ ಆರು ಜನ ಸ್ಮಾಮೀಜಿಗಳು ,ಮುಸ್ಲಿಂ ಮೌಲಾನಾಗಳು ಮತ್ತು ಕ್ರೈಸ್ತ ಧರ್ಮಗುರುಗಳು ಜನತೆಗೆ ಸಂದೇಶ ನೀಡಲಿದ್ದಾರೆ.ಸರ್ವ ಧರ್ಮದ ಶಾಂತಿಯ ತೋಟವಾಗಿರುವ ಕರ್ನಾಟಕ ಅದೇ ರೀತಿ ಮುಂದುವರೆಯಬೇಕು.ಸೌಹಾರ್ದ ಬಯಸುವ ನಾಡಿನ ಜನತೆ ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿ ಮಾಡಿದ್ದಾರೆ.
Kshetra Samachara
13/05/2022 06:56 pm