ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ನದಿಯಲ್ಲಿ ವೀಣೆಯ ಝೇಂಕಾರದ ಅನುರಣನ:ಸಂಗೀತಪ್ರಿಯರಿಗೆ ರೋಮಾಂಚನ !

ವರದಿ: ರಹೀಂ ಉಜಿರೆ

ಮಲ್ಪೆ: ಶಾಸ್ತ್ರೀಯ ಸಂಗೀತ ಕಚೇರಿಗೆ ಅದರದ್ದೇ ಆದ ಘನತೆ ಇದೆ.ನಿಯಮ ಇದೆ. ಎಲ್ಲೆಂದರಲ್ಲಿ ಅದನ್ನು ಹಾಡುವಂತಿಲ್ಲ. ಆದರೆ ನಿಯಮಕ್ಕೆ ಚ್ಯುತಿ ಬಾರದಂತೆ ತ್ರಿವೇಣಿ ಸಂಗಮದೊಂದಿಗೆ ಸಮುದ್ರ ರಾಜನಲ್ಲಿ ಲೀನವಾಗುವ ನದಿಯಲ್ಲಿ ದೋಣಿಯಲ್ಲಿ ವೀಣಾ ವಾದನ ಪ್ರಯೋಗ ಮೊದಲ ಬಾರಿ ನಡೆಯಿತು. ರಾಷ್ಟ್ರಮಟ್ಟದ ಖ್ಯಾತಿಯ ವೀಣಾ ವಾದಕಿ ಉಡುಪಿಯ ವಿದುಷಿ ಪವನ ಆಚಾರ್ಯ ಇದನ್ನು ನಡೆಸಿಕೊಟ್ಟದ್ದು ವಿಶೇಷ.

ಇದು ನಡೆದದ್ದು ಶ್ರೀ ದುರ್ಗಾದೇವಿ ಮಹಾಕಾಳಿ ಅಮ್ಮನವರ ದೇವಸ್ಥಾನ ಕೋಡಿಬೆಂಗ್ರೆಯಲ್ಲಿ. 15 ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸ ಪ್ರಯುಕ್ತ ಇದನ್ನು ಹಮ್ಮಿಕೊಳ್ಳಲಾಗಿತ್ತು.

ದೇವಸ್ಥಾನದ ಎದುರಿನ ಯಜ್ಞ ಕುಂಡದಲ್ಲಿ ವೇದ ಮೂರ್ತಿ ವಾಗೀಶ ಶಾಸ್ತ್ರೀ ಪಾವಂಜೆ ನೇತೃತ್ವದಲ್ಲಿ ಚಂಡಿಕಾಯಾಗದ ವೇದಗಳ ಘೋಷವಾದರೆ ನದಿಯಲ್ಲಿ ಪವನ ಆಚಾರ್ಯರ ವೀಣೆಯ ಝೇಂಕಾರದ ಅನುರಣನ ಮನಸೂರೆಗೊಂಡಿತು.

ತ್ರಿಶಕ್ತಿ ಸ್ವರೂಪಿಣಿ ದೇವಿಯ ಪ್ರಿತ್ಯರ್ಥ ಇಲ್ಲಿನ ಸೀತಾ ,ಸ್ವರ್ಣ ಮತ್ತು ಮಡಿಸಾಲು ನದಿಯ ಸಂಗಮ ಸ್ಥಳವಾದ ಕೋಡಿ ನದಿ ತೀರದಲ್ಲಿ ದೋಣಿಯಲ್ಲಿ ವೀಣಾ ವಾದನ ಮಾಡಲು ಇಲ್ಲಿನ ದೇವಸ್ಥಾನದ ಸಂಘಟಕರು ದೋಣಿಯಲ್ಲಿ ಕುಳಿತುಕೊಂಡು ವೀಣಾ ವಾದನ ಮಾಡಲು ಮತ್ತು ಪಕ್ಕ ವಾದ್ಯ ನುಡಿಸಲು ವೇದಿಕೆಯೊಂದನ್ನು ಮಾಡಿದ್ದರು.

ಹಲವಾರು ಶಾಸ್ತ್ರೀಯ ರಾಗದ ಅನೇಕ ಗೀತೆಯನ್ನು ವಿದುಷಿ ಪವನ ಆಚಾರ್ಯರು ವೀಣೆಯಲ್ಲಿ ನಾದ ವನ್ನು ಹೊರಹೊಮ್ಮಿಸಿದ್ದನ್ನು ಕೇಳಿ ಇಲ್ಲಿನ ಜನರು ತನ್ಮಯರಾದರು.

Edited By :
PublicNext

PublicNext

30/04/2022 05:43 pm

Cinque Terre

58.01 K

Cinque Terre

0

ಸಂಬಂಧಿತ ಸುದ್ದಿ