ಕಾಪು: ಇಂದಿನ ದಿನಗಳಲ್ಲಿ ದೇವರು ರಾಜಕೀಯ ಪಕ್ಷಗಳ ಪೋಸ್ಟರ್ ಆಗಿದ್ದಾರೆ. ದೇವರ ಹೆಸರಲ್ಲಿ ಮತ ಕೇಳಲಾಗುತ್ತಿದೆ. ಎಲ್ಲಿಯವರೆಗೆ ನಾವು ನಮ್ಮತನ ಉಳಿಸಿ, ಅಂತವರನ್ನು ತಿರಸ್ಕರಿಸುತ್ತೇವೆಯೋ ಆಗ ಸಮಾಜ ಸುಧಾರಣೆ ಸಾಧ್ಯ ಎಂದು ಕಾಪು ಕೊಪ್ಪಲಂಗಡಿ ಕಮ್ಯುನಿಟಿ ಸಭಾ ಭವನದಲ್ಲಿ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದರು.
ಕಾಪು ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್ ಹಾಗೂ ಅಲ್ಪ ಸಂಖ್ಯಾತ ಘಟಕ ಆಯೋಜಿಸಿದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ವಹಿಸಿದ್ದರು.
ಈ ಸಂದರ್ಭ ಶಿರ್ವ ಆರೋಗ್ಯ ಮಾತಾ ಚರ್ಚಿನ ಸಹಾಯಕ ಧರ್ಮಗುರು ರೆ.ಫಾ. ರೋಲ್ವಿನ್ ಅರ್ಹಾನ, ಪೊಲಿಪು ಜಾಮಿಯಾ ಮಸೀದಿ ಖತೀಬರಾದ ಇರ್ಶಾದ್ ಸ ಅದಿ , ಬಿಲ್ಲವ ಮಹಾ ಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾಂಗ್ರೆಸ್ ಪ್ರವರ್ತಕ ನವೀನ್ ಚಂದ್ರ ಜೆ. ಶೆಟ್ಟಿ, ಶರ್ಪುದ್ದೀನ್ ಶೇಖ್, ರಮೀಜ್ ಹುಸೈನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
28/04/2022 10:39 pm