ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಪರ್ಯಂತ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಪ್ರಯುಕ್ತ ಎ.9ರಂದು ರಾತ್ರಿ ಮೃಗಬೇಟೆ ಉತ್ಸವ, ಎ.10 ರಂದು ಬೆಳಿಗ್ಗೆ ವಿಶೇಷ ಪ್ರಾರ್ಥನೆ, ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ ನಡೆಯಿತು. ಮಧ್ಯಾಹ್ನ ಮಹಾ ನೈವೇದ್ಯ, ಮಂಗಳಾರತಿ ಬಳಿಕ ದೇವರು ಯಜ್ಞಕ್ಕೆ ಹೊರಡುವ ಕಾರ್ಯಕ್ರಮ ನಡೆಯಿತು.
ಸಂಜೆ ಯಜ್ಞ ಪೂರ್ಣಾಹುತಿ ನಡೆದು ಶ್ರೀದೇವರ ಬ್ರಹ್ಮರಥಾರೋಹಣ, ಭೂರಿ ಸಮಾರಾಧನೆ, ರಾತ್ರಿ ಬ್ರಹ್ಮರಥದಲ್ಲಿ ಶ್ರೀ ದೇವರಿಗೆ ರಾತ್ರಿ ಪೂಜೆ, ಬ್ರಹ್ಮರಥೋತ್ಸವ, ವಿಶ್ರಾಂತಿ ಪೂಜೆ, ಶ್ರೀದೇವರ ದರ್ಶನ ಸೇವೆ, ಚಂದ್ರಮಂಡಲ ಉತ್ಸವ, ವಸಂತ ಪೂಜೆ, ಏಕಾಂತ ಶಯನ ಪೂಜೆ ನಡೆಯಿತು.
ಎ.11ರಂದು ಸೋಮವಾರ ಕವಾಟೋದ್ಘಾಟನೆ, ಸಾಯಂಕಾಲ ಅವಭೃತ ಓಕುಳಿ ಉತ್ಸವ, ಎ.16ರಂದು ಶತಕಲಶ ಸಂಪ್ರೋಕ್ಷಣೆ ನ
Kshetra Samachara
10/04/2022 08:52 pm