ಬಜಪೆ: ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀದುರ್ಗೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ದುರ್ಗೇಶ್ವರಿ ದೇವಿ ಮತ್ತು ಶ್ರೀ ಮಹಾಗಣಪತಿ ದೇವರ ನೂತನ ದೇವಾಲಯಕ್ಕೆ ಇಂದು ಬೆಳಿಗ್ಗೆ ಮಧ್ವಾಚಾರ್ಯ ಸಂಸ್ಥಾನ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾತೀರ್ಥ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು.
ವೇದಮೂರ್ತಿ ರಾಧಾಕೃಷ್ಣ ತಂತ್ರಿ ಎಡಪದವು, ಅರ್ಚಕ ವೇದಮೂರ್ತಿ ಸದಾಶಿವ ಕಾರಂತ, ವಾಸ್ತುಶಿಲ್ಪಿ ಕೃಷ್ಣರಾಜ ತಂತ್ರಿ ಕುಡುಪು, ಅನಂತಪದ್ಮನಾಭ ಮಯ್ಯ ಬೆಂಗಳೂರು, ಡಾ. ಗಣೇಶ್ ಕುಮಾರ್ ಮಂಗಳೂರು, ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ಕುಮಾರ್ ಅಗರಿ, ಉಪ ಮ್ಯಾನೇಜಿಂಗ್ ಟ್ರಸ್ಟಿ ತುಳಸೀದಾಸ್ ಅಮೀನ್, ಟ್ರಸ್ಟಿಗಳಾದ ಪುರುಷೋತ್ತಮ್ ಕೆ., ಉಮೇಶ್ ಅಮೀನ್ ನಾಗಂದಡಿ, ವಸಂತಿ ಕೆ., ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಕಾರ್ಯದರ್ಶಿ ಅರ್ಜುನ್ ಪಂಡಿತ್, ಶ್ರೀದುರ್ಗೇಶ್ವರೀ ಸೇವಾ ಸಮಿತಿ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ ಮತ್ತಿತರರು ಉಪಸ್ಥಿತರಿದ್ದರು. ದುರ್ಗೆಶ್ವರಿ ಸೇವಾ ಸಮಿತಿ ಕಾರ್ಯದರ್ಶಿ ಶಿವರಾಮ್ ಕಾರಂತ್ ನಿರೂಪಿಸಿದರು
Kshetra Samachara
23/01/2022 07:43 pm