ಕೊಲ್ಲೂರು: ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಆಶ್ರಯದಲ್ಲಿ ಕೊಲ್ಲೂರಿನಲ್ಲಿ ಭಜನಾ ಅಭಿಯಾನ ನಡೆಯಿತು. ದ್ವಿತೀಯ ವರ್ಷದ ಭಜನಾ ಅಭಿಯಾನ ಬಹಳ ವಿಜೃಂಭಣೆಯಿಂದ ನಡೆದಿದ್ದು ನೂರಾರು ಭಜನಾ ತಂಡಗಳು ಕಾರ್ಯಕ್ರಮದಲ್ಲಿ ಭಾಗಿಯಾದವು. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದ ನಂತರ ದೇಗುಲದ ಪ್ರಾಂಗಣದಲ್ಲಿರುವ ಸುವರ್ಣ ಮಂಟಪದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಎಲ್ಲ ತಂಡಗಳು ದೇವರ ನಾಮಸ್ಮರಣೆಯನ್ನು ಮಾಡಿದವು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಅಧಿಕಾರಿಗಳು, ಕೊಲ್ಲೂರು ದೇವಸ್ಥಾನದ ಅರ್ಚಕರು ಅಧಿಕಾರಿವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Kshetra Samachara
05/01/2022 02:11 pm