ಮುಲ್ಕಿ: ದೇಶವನ್ನು ರಕ್ಷಿಸುವ ನಮ್ಮ ಸೈನಿಕರ ಅಕಾಲಿಕ ಅಗುಲುವಿಕೆ ಉಹಿಸಲು ಅಸಾದ್ಯವಾಗಿದ್ದು ಅವರರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬಕ್ಕೆ ದುಖಃ ಸಹಿಸುವ ಶಕ್ತಿ ಪರಮಾತ್ಮ ನೀಡಬೇಕು ಎಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯೀಶ್ ಚೌಟ ಹೇಳಿದರು.
ಕಿನ್ನಿಗೋಳಿ ರಾಮಮಂದಿರದಲ್ಲಿ ಕಿನ್ನಿಗೋಳಿ ರಾಮ ಮಂದಿರ, ಜಿಎಸ್‌ಬಿ ಕಿನ್ನಿಗೋಳಿ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಜರಗಿದ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಮಹಾ ದಂಡನಾಯಕ ಜ| ಬಿಪಿನ್ ರಾವತ್ ಅವರ ಪತ್ನಿ ಸಹಿತ 12 ಮಂದಿ ವೀರ ಸೈನಿಕರಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ವಾಗ್ಮಿ ಸೊಂದಾ ಮನು ಕಶ್ಯಪ್ ಕಟೀಲು ಅಗಲಿದ ವೀರ ಸೇನಾನಿಗಳ ಬಗ್ಗೆ ಮಾತನಾಡಿ ರಾಷ್ಟ್ರ , ದೇಶದ ಬಗ್ಗೆ ಹಾಗೂ ನಮ್ಮ ದೇಶದ ವೀರ ಸೇನಾನಿಗಳ ಬಗ್ಗೆ ಕೀಳರಿಮೆ ಬೇಡ, ನಾವು ಅವರಿಗೆ ಗೌರವ ಕೊಡೋಣ ಅವರ ಸೇವೆಗಳು ಆದರ್ಶಪ್ರಾಯವಾಗಿದೆಯೆಂದು ಹೇಳಿದರು.
ನಿವೃತ್ತ ಸೇನಾನಿಗಳಾದ ಅಚ್ಯುತ ಪ್ರಭು, ಸತೀಶ್ ಶೆಣೈ, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ದೇವಸ್ಯ ಮಠದ ವೇದವ್ಯಾಸ ಉಡುಪ, ರಾಮಮಂದಿರ ಮಾಜಿ ಅಧ್ಯಕ್ಷ ಅಚ್ಯುತ ಮಲ್ಯ , ಮಂದಿರದ ಅರ್ಚಕ ರಾಧಾಕೃಷ್ಣ ನಾಯಕ್, ಆದಿತ್ಯ ಕಾಮತ್ , ಕೋಶಾಧಿಕಾರಿ ಮಂಜುನಾಥ ಮಲ್ಯ , ಗುರುದತ್ತ ರಾವ್, ರಾಜೇಶ್ ಕಾಮತ್ , ರಂಜನ್ ರಾಣ್ಯ, ಯಶವಂತ್ ಶೆಟ್ಟಿಗಾರ್, ಮತ್ತಿತರರಿದ್ದರು.
Kshetra Samachara
17/12/2021 08:12 pm