ಉಡುಪಿ; ಕವಿ ಮುದ್ದಣ ಮಾರ್ಗದಲ್ಲಿರುವ ಶ್ರೀ ಜಗದ್ಗುರು ನಿತ್ಯಾನಂದ ಸ್ವಾಮೀಜಿ ಮಂದಿರ- ಮಠದಲ್ಲಿ 59 ನೇ ವರ್ಷದ ವಾರ್ಷಿಕೋತ್ಸವವು ಸಂಪನ್ನಗೊಂಡಿತು.ಗಣಹೋಮ, ಭಜನೆ, ಜಾಮ ಪೂಜೆ, ಮಹಾಪೂಜೆ, ಪಲ್ಲ ಪೂಜೆ, ಪಲ್ಲಕಿ ಉತ್ಸವ, ಬಾಲಬೋಜನ, ಅನ್ನ ಸಂತರ್ಪಣೆ ಮೊದಲಾದ ಧಾರ್ಮಿಕ ಪ್ರಕ್ರಿಯೆಗಳು ಪುತ್ತೂರು ವೇದಮೂರ್ತಿ ಹಯವದನ ತಂತ್ರಿ ಅವರ ಪುರೋಹಿತ್ಯದಲ್ಲಿ ನಡೆದವು.
ನಿತ್ಯಾನಂದ ಮಹಿಳಾ ಮಂಡಳಿ, ನಿತ್ಯಾನಂದ ಪುರುಷ ಭಕ್ತವೃಂದ, ನಿತ್ಯಾನಂದ ಬಾಲವೃಂದ ಮಲ್ಪೆ , ಶ್ರೀಕಾಂತ್ ಶೆಟ್ಟಿ ಕಾರ್ಕಳ ಮತ್ತು ಬಳಗ ಉಡುಪಿ, ಶ್ರೀ ಪಂಚಮಿ ಭಜನಾ ಸೇವಾ ತಂಡ ಉಡುಪಿ, ಶ್ರೀಜಯ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕರ್ನಪಾಡಿ, ವಿಷ್ಣು ಭಜನಾ ಮಂಡಳಿ ಎರ್ಮಾಳು, ಅಯ್ಯಪ್ಪ ಸ್ವಾಮಿ ಮಂದಿರ ಮಲ್ಪೆ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಿತು.
ಉದ್ಯಮಿ ಕೆ. ಸೂರ್ಯಪ್ರಕಾಶ್ ಅವರು ನಂದಾದೀಪವನ್ನು ಪ್ರಜ್ವಲಿಸಿ ವಾರ್ಷಿಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪುರುಷೋತ್ತಮ ಶೆಟ್ಟಿ, ಮನೋಹರ್ ಶೆಟ್ಟಿ, ಮಂದಿರ- ಮಠದ ಅಧ್ಯಕ್ಷರು ಎರ್ಮಾಳ್ ಶಶಿಧರ ಶೆಟ್ಟಿ ಮೊದಲಾದದವರು ಉಪಸ್ಥಿತರಿದ್ದರು.
Kshetra Samachara
25/11/2020 10:22 am