ವರದಿ: ಸಂದೇಶ್ ಶೆಟ್ಟಿ ಆಜ್ರಿ, ಪಬ್ಲಿಕ್ ನೆಕ್ಸ್ಟ್, ಉಡುಪಿ
ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಭೌಗೋಳಿಕವಾಗಿ ತನ್ನದೇ ಆದ ಸಂಸ್ಕೃತಿ, ಆಚಾರ- ವಿಚಾರ ಒಳಗೊಂಡಿದೆ.
ಕರಾವಳಿ ಭಾಗದಲ್ಲಿ ಕುಂದಾಪುರ ಅರೆ ಭಾಷೆಯ ಒಂದು ತಾಲೂಕು. ಇಲ್ಲಿ ಪ್ರತಿ ಹಬ್ಬದ ವಾತಾವರಣ ಬಂದ್ರೆ ತನ್ನದೇ ಆದ ವಿಶೇಷ ಕಲ್ಪನೆ ಒಳಗೊಂಡ ಹಬ್ಬಗಳು ಆಚರಿಸಲ್ಪಡುತ್ತದೆ. ದೀಪಾವಳಿ ಹಬ್ಬದ ಆಚರಣೆ ಕೂಡ ಒಂದು ವಿಶೇಷ ಆಚರಣೆ ಒಳಗೊಂಡಿದೆ. ಹಬ್ಬದ ದಿನ ಮನೆಯ ಮಡಿಲಿಗೆ ಅಕ್ಕಿ ತುಂಬುವ ವಿಶೇಷ ಕಾರ್ಯಕ್ರಮ ನಡೆಯುತ್ತದೆ.
ಮನೆಯ ಮಡಿಲು ಅಂದ್ರೆ ಅದು ಅಕ್ಕಿಯ ಕೇಲು ಪಾತ್ರೆಗೆ ಅಕ್ಕಿ ತುಂಬಿಸುವುದು, ವರ್ಷಂಪ್ರತಿ ತಾವು ಬೆಳೆದ ಭತ್ತವನ್ನು ಅಕ್ಕಿ ಮಾಡಿ, ದೀಪಾವಳಿ ದಿನದಂದು ಆ ಪಾತ್ರೆಯಲ್ಲಿ ಇಡುತ್ತಾರೆ. ಮುಂದಿನ ವರ್ಷ ಕೃಷಿಯಲ್ಲಿ ತೊಡಗಿಕೊಳ್ಳುವವರೆಗೂ ಅದೇ ಪಾತ್ರೆಯಲ್ಲಿ ಅಕ್ಕಿ ತುಂಬಿರುತ್ತದೆ, ಈ ರೀತಿ ಸಂಪ್ರದಾಯಬದ್ಧವಾದ ಆಚರಣೆ ಕರಾವಳಿ ಭಾಗದಲ್ಲಿ ವಿಶೇಷವಾಗಿ ಹಬ್ಬದ ದಿನದಂದು ನಡೆದುಕೊಂಡು ಬರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯಾಗಿ ತಮ್ಮ ಹಬ್ಬದ ಆಚರಣೆ ಮಾಡಿಕೊಂಡು ಬಂದಿರುವ ಸಂಪ್ರದಾಯ ಇಂದಿಗೂ ಕೂಡ ನಡೆದುಕೊಂಡು ಬರುತ್ತಿದೆ.
Kshetra Samachara
15/11/2020 11:36 am