ಉಡುಪಿ: ಉಡುಪಿ ಜಿಲ್ಲೆಯ ಮೂಡಬೆಟ್ಟು ಚಂಡ್ಕಳ್ ಶ್ರೀ ಶಾರದಾಂಬ ಮತ್ತು ಮಹಾಕಾಳಿ ಕ್ಷೇತ್ರದಲ್ಲಿ ನವರಾತ್ರಿಯ ಅಂಗವಾಗಿ ದರ್ಶನ ಸೇವೆ ನಡೆಯಿತು.
ಸರಕಾರದ ಕೋವಿಡ್ 19 ನಿಯಮಾವಳಿಯ ಪ್ರಕಾರ ಈ ವರ್ಷ ಧಾರ್ಮಿಕ ವಿಧಿ ವಿಧಾನಗಳನ್ನು ಸರಳವಾಗಿ ಆಚರಣೆ ಮಾಡಲಾಯಿತು. ದೇವಿ ಮಹಾಕಾಳಿಯ ದರ್ಶನ ಸೇವೆಯಲ್ಲಿ ಭಕ್ತರು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಕ್ಷೇತ್ರದ ದರ್ಶನ ಪಾತ್ರಿ ವಿಠಲ ಪಾತ್ರಿ ಯವರು ಪ್ರಸಾದ ವಿತರಿಸಿದರು.
Kshetra Samachara
27/10/2020 02:29 pm