ಕೊಲ್ಲೂರು: ಪ್ರಸಿದ್ಧ ಪುಣ್ಯಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿಜಯದಶಮಿ ದಿನವಾದ ಇಂದು
ಸಾಮೂಹಿಕ ಅಕ್ಷರಭ್ಯಾಸ ನಡೆಯಿತು.
ಈ ದಿನದಂದು ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಆಗಮಿಸುವ ಸಾವಿರಾರು ಭಕ್ತರು ಮಕ್ಕಳಿಗೆ ವಿದ್ಯಾರಂಭ ಮಾಡಿಸುವುದು ವಾಡಿಕೆ. ಆದರೆ, ಈ ಬಾರಿ ಕೋವಿಡ್ ಕಾರಣದಿಂದ ಸೀಮಿತ ಭಕ್ತರಷ್ಟೇ ಇದ್ದರು.
ಏನಿದು ವಿದ್ಯಾರಂಭ?: ತಮ್ಮ ಮಕ್ಕಳಿಗೆ ಕೊಲ್ಲೂರು ದೇವಸ್ಥಾನದಲ್ಲಿ ವಿಜಯದಶಮಿಯಂದು ನಡೆಯುವ ವಿದ್ಯಾರಂಭ ಪೂಜೆಗೆ ಪ್ರಶಸ್ತ ಸ್ಥಳ ಎಂದು ಪೋಷಕರು ನಂಬುತ್ತಾರೆ. ಈ ದಿನ ದೇವಿ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ನಡೆಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಶಾರದಾ ದೇವಿಯ ಮೂರ್ತಿಯ ಎದುರಿನಲ್ಲಿ ಮಕ್ಕಳಿಗೆ ಮೊತ್ತಮೊದಲ ಅಕ್ಷರಭ್ಯಾಸ ಮಾಡಲಾಗುತ್ತದೆ. ಮಕ್ಕಳ ನಾಲಿಗೆಯ ಮೇಲೆ ಅರಿಶಿನ ಕೊಂಬಿನಲ್ಲಿ ಓಂಕಾರ ಬರೆಯಲಾಗುತ್ತದೆ. ನಂತರ ಹೆತ್ತವರು ಮಕ್ಕಳ ಕೈ ಹಿಡಿದು ಅಕ್ಕಿಕಾಳಿನಲ್ಲಿ ಓಂಕಾರ ಹಾಗೂ ಗಣೇಶನಾಮ ಹಾಗೂ ತಮ್ಮ ಮಾತ್ರ ಭಾಷೆ, ಎ,ಬಿ,ಸಿ, ಸಂಖ್ಯೆಗಳು, ಅ,ಆ,ಇ. ಇತ್ಯಾದಿ ಬರೆಸುವುದರ ಮೂಲಕ ಅಕ್ಷರಭ್ಯಾಸ ಮಾಡಿಸುತ್ತಾರೆ. ಬಳಿಕ ಮಕ್ಕಳ ನಾಲಗೆಯ ಮೇಲೆ ಬಂಗಾರದ ಉಂಗುರದ ಸ್ಪರ್ಶ ಮಾಡಲಾಗುತ್ತದೆ.
ನಂಬಿಕೆಯ ಪ್ರಕಾರ ಹೀಗೆ ಮಾಡುವುದರಿಂದ ಮಕ್ಕಳ ನಾಲಗೆಯ ಮೇಲೆ ಸರಸ್ವತಿ ದೇವಿ ನೆಲೆಸಿ ಮಕ್ಕಳ ಶೈಕ್ಷಣಿಕ ಬದುಕು ಉತ್ತಮವಾಗಿರುತ್ತದೆಂಬ ನಂಬಿಕೆ ಇದೆ. ಅದರಂತೆ ಇಂದು ಮುಂಜಾನೆ ಯಿಂದಲೇ ಸ್ಥಳೀಯ ಭಕ್ತರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ವಿದ್ಯಾರಂಭ ಮಾಡಿಸಿದರು.
Kshetra Samachara
26/10/2020 11:58 am