ಮುಲ್ಕಿ: ನವರಾತ್ರಿಯ ಪರ್ವಕಾಲದಲ್ಲಿ ಶ್ರೀ ನವ ದುರ್ಗೆಯರ ಆರಾಧನೆಯಿಂದ ಲೋಕದಲ್ಲಿ ಸಾಮರಸ್ಯ, ನೆಮ್ಮದಿ, ಪ್ರಗತಿ ಸಾಧ್ಯ ಎಂದು ಉದ್ಯಮಿ ಗುರುರಾಜ್ ಎಸ್. ಪೂಜಾರಿ ತೋಕೂರು ಹೇಳಿದರು. ಅವರು ಚಿತ್ರಾಪು ಬಿಲ್ಲವರ ಸಂಘ, ಮುಂಬೈ ವತಿಯಿಂದ ಶ್ರೀ ವಿಠೋಬ ಬಾಲಲೀಲಾ ಭಜನಾ ಮಂದಿರದಲ್ಲಿ ನವರಾತ್ರಿ ಮಹೋತ್ಸವಕ್ಕೆ ದೀಪ ಬೆಳಗಿಸಿ, ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ಬಿಲ್ಲವರ ಸಂಘದ ಅಧ್ಯಕ್ಷ ರಮೇಶ್ ಕೆ, ಅಮೀನ್, ಸುರತ್ಕಲ್ ಡಿಕೆ ಅಸೋಸಿಯೇಟ್ಸ್ ನ ದೇವೇಂದ್ರ ಕೆ.ಶೆಟ್ಟಿ, ರಾಜೇಶ್ವರಿ ಡಿ. ಶೆಟ್ಟಿ, ಮುಲ್ಕಿ ನಪಂ ಸದಸ್ಯ ಯೋಗೀಶ್ ಕೋಟ್ಯಾನ್, ಭಜನಾ ಮಂದಿರ ಗೌರವಾಧ್ಯಕ್ಷರಾದ ರಮೇಶ ಎ. ಅಮೀನ್, ಬಾಲಚಂದ್ರ ಸನಿಲ್, ಅಧ್ಯಕ್ಷ ಲೋಕೇಶ್ ಪಿ. ಕೋಟ್ಯಾನ್, ಉಪಾಧ್ಯಕ್ಷ ಮಂಜುನಾಥ ಕೆ.ಪಿ., ಕಾರ್ಯದರ್ಶಿ ರಿತೇಶ್ ಎಸ್. ಪೂಜಾರಿ, ಕೋಶಾಧಿಕಾರಿ ಪ್ರಜ್ವಲ್ ಆರ್. ಕೋಟ್ಯಾನ್, ಹಿರಿಯ ಸದಸ್ಯ ಗಂಗಾಧರ ಅಮೀನ್, ಭಜನಾ ಸಂಚಾಲಕ ಅಶೋಕ ಎ. ಅಮೀನ್, ಪದಾಧಿಕಾರಿಗಳಾದ ಜಿ.ಟಿ. ಪೂಜಾರಿ, ಸೋಮನಾಥ್ ಸಿ. ಪೂಜಾರಿ, ಉಮೇಶ್ ಜಿ. ಕೋಟ್ಯಾನ್, ಅರ್ಚಕ ಯಾದವ ಶಾಂತಿ, ಶ್ರೀ ವಿಠೋಬ ಬಾಲಲೀಲಾ ಮಹಿಳಾ ಮಂಡಳಿಯ ದಯಾವತಿ ಎನ್. ಕೋಟ್ಯಾನ್, ಕುಸುಮ ಆರ್. ಕೋಟ್ಯಾನ್, ಮಾಲಿನಿ ಕೋಟ್ಯಾನ್, ಗಾಯತ್ರಿ ಜೆ. ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/10/2020 10:06 am