ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಏಳಿಂಜೆಯಲ್ಲೊಂದು ಹಿಂದೂ-ಕ್ರೈಸ್ತ ಭಾವೈಕ್ಯತೆಯ ಧಾರ್ಮಿಕ ಸಾಮರಸ್ಯ ಕಾರ್ಯ

ಕಿನ್ನಿಗೋಳಿ ಸಮೀಪದ ಏಳಿಂಜೆ ಎಂಬಲ್ಲಿ ಹಿಂದೂ-ಕ್ರೈಸ್ತ ಭಾವೈಕ್ಯತೆಯ ಧಾರ್ಮಿಕ ಸಾಮರಸ್ಯ ಸಾರುವ ಕಾರ್ಯವೊಂದು ಪ್ರತಿ ವರ್ಷವೂ ನಡೆಯುತ್ತಿದೆ.

ಕಿನ್ನಿಗೋಳಿ ಏಳಿಂಜೆ ಸಮೀಪದ ಕೋಡಂಗೆಯ ಜೋಸೆಪ್ ಡಾಲ್ಪಿ ಡಿಸೋಜ ಅವರು ಹಿಂದೂಗಳ ತೆನೆ ಕಟ್ಟುವ ಸಂಪ್ರದಾಯಕ್ಕೆ ಭತ್ತದ ಬೆಳೆ ಬೆಳೆಯುತ್ತಾರೆ. ಕಳೆದ ಹಲವು ವರ್ಷಗಳಿಂದ ಬಪ್ಪನಾಡು ದುರ್ಗಾಪರಮೆಶ್ವರೀ, ಏಳಿಂಜೆ ಲಕ್ಷೀ ಜನಾರ್ಧನ ಮಹಾಗಣಪತಿ ದೇವಸ್ಥಾನ, ಪಟ್ಟೆ ಜಾರಂದಾಯ ದೈವಸ್ಥಾನ ಸ್ಥಳೀಯರಿಗೆ ತೆನೆಯನ್ನು ಉಚಿತವಾಗಿ ನೀಡಿ ಹಿಂದೂ-ಕ್ರೈಸ್ತ ಭಾವೈಕ್ಯತೆಯನ್ನು ಸಾರಿದ್ದಾರೆ.

ಏಳಿಂಜೆ ನಿವಾಸಿ ಕೃಷಿಕ ಜೋಸೆಫ್‌ ಡಾಲ್ಪಿ ಡಿಸೋಜ ಅವರು ತಮ್ಮ ಹಿರಿಯರ ಕಾಲದಿಂದಲೂ ಕೃಷಿಯನ್ನೇ ನಂಬಿಕೊಂಡು ಬಂದವರು. ತಮ್ಮ ಹಿರಿಯರ ಕಾಲದಿಂದಲೂ ಸುಮಾರು 10 ಎಕರೆ ಕೃಷಿ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ತೆಂಗು ಕಂಗು, ಬಾಳೆಯನ್ನು ಬೆಳೆಸಿದ್ದಾರೆ. ಆದರೆ ತಾವು ಹಲವು ವರ್ಷಗಳಿಂದ ದೇವಸ್ಥಾನ ದೈವಸ್ಥಾನಗಳಿಗೆ ತೆನೆ ಕೊಡುವ ಸಂಪ್ರದಾಯ ಯಾವತ್ತು ನಿಲ್ಲಬಾರದು ಎಂದು ತಿಳಿದು ಸುಮಾರು ಅರ್ಧ ಎಕರೆ ಜಾಗದಲ್ಲಿ ತೆನೆಗೋಸ್ಕರ ಭತ್ತ ಬೆಳೆಯುತ್ತಾರೆ.

ಚರ್ಚ್‌ಗಳಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 8ರಂದು ತೆನೆ ಹಬ್ಬ ನಡೆಯುತ್ತಿದ್ದು ಸ್ಥಳೀಯ ನಕಿರೆಂ ಚರ್ಚ್‌ಗೆ ಜೋಸೆಫ್‌ ಡಾಲ್ಪಿ ಡಿಸೋಜ ಕೊಡುತ್ತಿದ್ದು ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಾರೆ. ಚಿಕ್ಕಮಂಗಳೂರು, ದೆಹಲಿ ಮಾತ್ರವಲ್ಲದೆ ಲಂಡನ್, ಇಟಲಿ, ದುಬೈ, ಶಾರ್ಜಾ ಮತ್ತಿತರ ಹೊರ ದೇಶಗಳಿಗೂ ಕಳುಹಿಸಿದ್ದಾರೆ.

ಏನೇ ಆಗಲಿ ಜೋಸೆಫ್‌ ಮುಖಾಂತರ ಹಿಂದೂ ಕ್ರೈಸ್ತ ಸಾಮರಸ್ಯದ ಕಾರ್ಯವನ್ನು ಮೆಚ್ಚಲೇ ಬೇಕಾಗಿದೆ.

Edited By :
Kshetra Samachara

Kshetra Samachara

30/08/2022 01:42 pm

Cinque Terre

9.46 K

Cinque Terre

0

ಸಂಬಂಧಿತ ಸುದ್ದಿ