ಕುಂದಾಪುರ: ಬಹು ವರ್ಷದ ಇತಿಹಾಸವಿರುವ ನವರಾತ್ರಿಯ ಹುಲಿವೇಷವು ಕುಂದಾಪುರದ ವೈಶಿಷ್ಟ್ಯ. ಈ ಬಾರಿ ವೇಷ ಹಾಕಿದ ವಿವಿಧ
ತಂಡಗಳ ಹುಲಿವೇಷಧಾರಿಗಳು ಕುಂದಾಪುರದ ಪಾರಂಪರಿಕ ಹುಲಿ ನೃತ್ಯದೊಂದಿಗೆ ಸಾರ್ವಜನಿಕರನ್ನು ರಂಜಿಸಲಿದ್ದಾರೆ. ಇದರೊಂದಿಗೆ ಈ ಹಿಂದೆ ವೇಷ ಹಾಕಿದ ಹಳೆಯ ಹುಲಿವೇಷಧಾರಿಗಳು ಈ ವೇದಿಕೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.
ಈ ಕಾರ್ಯಕ್ರಮವು ಅಕ್ಟೋಬರ್ 4ರಂದು ಸಂಜೆ 7ಗಂಟೆಗೆ ನಗರದ ಪಾರಿಜಾತ ಸರ್ಕಲ್‌ನಲ್ಲಿ ವಿದ್ಯುತ್ ದೀಪಾಲಂಕೃತ, ಭವ್ಯ ವೇದಿಕೆಯಲ್ಲಿ ಜರುಗಲಿದೆ. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕುಂದಾಪುರದ ಹುಲಿವೇಷವನ್ನು ಉಳಿಸಿ ಬೆಳೆಸುವರೇ ಪ್ರೋತ್ಸಾಹಿಸಬೇಕೆಂದು ಕಲಾಕ್ಷೇತ್ರ-ಕುಂದಾಪುರ ಇದರ ಅಧ್ಯಕ್ಷ ಕಿಶೋರ್ ಕುಮಾರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
03/10/2022 08:54 pm