ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಇಂದು ಸಮುದ್ರ ಪೂಜೆ; ಮೀನುಗಾರರಿಂದ ಕ್ಷೀರ, ಎಳನೀರು ಅರ್ಪಣೆ

ಮಂಗಳೂರು: ಇಂದು ಸಮುದ್ರ ಪೂಜೆಯ ಪರ್ವ ದಿನ. ಕಡಲ ಮಕ್ಕಳಿಗೆ ಈ ಸುದಿನದಂದು ವಿಶೇಷ ಸಂಭ್ರಮಾಚರಣೆಯ ಖುಷಿಯೊಂದಿಗೆ ರಕ್ಷಾಬಂಧನದ ಬಾಂಧ್ಯವದ ಮೆರುಗು. ಕರುನಾಡ ಕರಾವಳಿಯಾದ್ಯಂತ ಮೀನುಗಾರರು ಇಂದು ಬೆಳಗ್ಗೆ ಸಮುದ್ರ ತಟದಲ್ಲಿ ವಿಶೇಷ ಪೂಜೆ- ಪ್ರಾರ್ಥನೆ ಸಲ್ಲಿಸಿ ಸಮುದ್ರ ರಾಜನಿಗೆ ಹಾಲು- ಎಳನೀರು ಎರೆದರು. ತೆಂಗಿನ ಕಾಯಿ ಜತೆಗೆ ನಾನಾ ಹೂವು- ಫಲ ವಸ್ತುಗಳನ್ನು ಅರ್ಪಿಸಿ ಧನ್ಯತಾ ಭಾವ ಮೆರೆದರು.

ಮಂಗಳೂರಿನ ತೋಟ ಬೆಂಗ್ರೆಯ ಕಡಲ ಕಿನಾರೆಯಲ್ಲಿಯೂ ಇಂದು ಸಮುದ್ರ ಪೂಜೆ ಭಕ್ತಿ ಸಂಭ್ರಮದಿಂದ ಜರುಗಿತು. ಬೆಂಗ್ರೆ ಶ್ರೀ ಮಹಾವಿಷ್ಣು ಶೇಷಶಯನ ಮಂದಿರದಲ್ಲಿ ಬೆಂಗ್ರೆ ಮಹಾಜನ ಸಭಾದ ನೇತೃತ್ವದಲ್ಲಿ ಮೊದಲು ಪ್ರಾರ್ಥನೆ ಸಲ್ಲಿಸಿ, ಆ ಬಳಿಕ ಭಜನೆಯೊಂದಿಗೆ ಮೆರವಣಿಗೆ ಕಡಲ ತೀರದತ್ತ ತೆರಳಿತು. ಅಲ್ಲಿ ಧಾರ್ಮಿಕ ವಿಧಿವಿಧಾನದಂತೆ ಪೂಜೆ ನಡೆದ ನಂತರ

ಮತ್ಸ್ಯ ಸಮೃದ್ಧಿ ಹಾಗೂ ಮೀನುಗಾರಿಕೆ ನಿರ್ವಿಘ್ನವಾಗಿ ನಡೆಯಲು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬೆಂಗ್ರೆ ಮಹಾಜನ ಸಭಾ ಅಧ್ಯಕ್ಷ ಚೇತನ್ ಬೆಂಗ್ರೆ, ಪ್ರಮುಖರಾದ ಶಶಿ ಮೆಂಡನ್, ಕೇಶವ ಕರ್ಕೇರ, ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

22/08/2021 04:57 pm

Cinque Terre

33.58 K

Cinque Terre

0

ಸಂಬಂಧಿತ ಸುದ್ದಿ