ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಯುವಕ ಮಂಡಲಗಳಿಗೆ ಕ್ರೀಡಾ ಸಾಮಾಗ್ರಿಗಳ ಹಸ್ತಾಂತರ

ಮೂಡುಬಿದಿರೆ: ಮನಸ್ಸು ಹಾಗೂ ಶರೀರಕ್ಕೆ ಪುಷ್ಠಿ ನೀಡುವ ಕ್ರೀಡೆಯ ಬಗ್ಗೆ ಯುವಕರಲ್ಲಿ ಆಸಕ್ತಿ ಮೂಡಿಸಬೇಕು ಎನ್ನುವ ದೃಷ್ಟಿಯಿಂದ ಯುವಕ ಮಂಡಲಗಳಿಗೆ ಸರ್ಕಾರ ಕ್ರೀಡಾ ಸಾಮಾಗ್ರಿ, ಕ್ರೀಡಾ ತರಬೇತಿಗಳನ್ನು ನೀಡುತ್ತಿದೆ. ಯುವಕಮಂಡಲ, ಸಂಘ ಸಂಸ್ಥೆಗಳ ನೋಂದವಣೆಯಾಗಿದಲ್ಲಿ ಸರ್ಕಾರದಿಂದ ಹಲವು ಬಗೆಯ ಸವಲತ್ತು ಸಿಗುತ್ತದೆ. ಸರ್ಕಾರದಿಂದ ಪಡೆದ ಸವಲತ್ತುಗಳನ್ನು ಯುವಕಮಂಡಲಗಳು ಸದ್ಬಳಕೆ ಮಾಡಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2019-20ನೇ ಸಾಲಿನ ಯುವಚೈತನ್ಯ ಹಾಗೂ ಕ್ರೀಡಾಮಿತ್ರ ಯೋಜನೆಯಡಿ ನೀಡಲಾದ ಕ್ರೀಡಾ ಸಾಮಾಗ್ರಿಗಳನ್ನು ಮೂಡುಬಿದಿರೆ ಪ್ರವಾಸಿ ಬಂಗಲೆಯಲ್ಲಿ ಶುಕ್ರವಾರ ಯುವಕಮಂಡಲಗಳಿಗೆ ಹಸ್ತಾಂತರಿಸಿ, ಮಾತನಾಡಿದರು.

ಕ್ರೀಡಾಮಿತ್ರ ಯೋಜನೆಯಡಿಯಲ್ಲಿ ನಮ್ಮ ಜವನೆರ್ ಮಂಜನಕಟ್ಟೆ, ಯುವ ಚೈತನ್ಯ ಯೋಜನೆಯಡಿಯಲ್ಲಿ ವಿಘ್ನೇಶ್ವರ ಫ್ರೆಂಡ್ಸ್ ಕ್ಲಬ್ ಮೂಡುಮಾರ್ನಾಡು ಹಾಗೂ ಕಡಂದಲೆಯ ವಿವೇಕಾನಂದ ಯುವಕಮಂಡಲಕ್ಕೆ ಕ್ರೀಡಾ ಸಾಮಾಗ್ರಿಗಳನ್ನು ನೀಡಲಾಯಿತು.

ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಅಧಿಕಾರಿ ಶಿವಾನಂದ ಕಾಯ್ಕಿಣಿ ಯುವಕಮಂಡಲಗಳಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.

ಜಿಪಂ ಸದಸ್ಯರಾದ ಕೆ.ಪಿ ಸುಚರಿತ ಶೆಟ್ಟಿ, ಸುಜಾತ ಕೆ.ಪಿ, ವಕೀಲ ಶಾಂತಿ ಪ್ರಸಾದ್ ಹೆಗ್ಡೆ,ಲೋಕೋಪಯೋಗಿ ಇಂಜಿನಿಯರ್ ರಾಘವೇಂದ್ರ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

02/10/2020 08:51 pm

Cinque Terre

23.62 K

Cinque Terre

0

ಸಂಬಂಧಿತ ಸುದ್ದಿ