ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊರಗರ ಕಲಾ ಶ್ರೀಮಂತಿಕೆ ಅನಾವರಣ; ಸೂರೆಗೊಂಡಿತು ಕಣ್ಮನ!

ವರದಿ: ರಹೀಂ ಉಜಿರೆ

ಉಡುಪಿ: ಆಧುನಿಕತೆ ಭರಾಟೆ ನಡುವೆ ಗುಡಿ ಕೈಗಾರಿಕೆ ವಸ್ತು ಸಿಗುವುದು, ಬಳಸುವುದು ಕಡಿಮೆ ಆಗಿದೆ. ಹೀಗಾಗಿ ಈ ನೆಲದ ಮೂಲ ನಿವಾಸಿಗಳ ಕಲಾತ್ಮಕತೆ ಪ್ರೋತ್ಸಾಹಿಸಲು ಗುಡಿ ಕೈಗಾರಿಕೆ ವಸ್ತು ತಯಾರಿ ಪ್ರಾತ್ಯಕ್ಷಿಕೆ- ಪ್ರದರ್ಶನ ಉಡುಪಿಯಲ್ಲಿ ನಡೆಯಿತು.

ಒಂದೆಡೆ ಜೋಡಿಸಿಟ್ಟ ವಿವಿಧ ಆಕೃತಿ ಬುಟ್ಟಿಗಳು, ಧಾನ್ಯಗಳನ್ನು ಸೇರುವ ಗೆರಸೆ, ಅನ್ನ ಬಸಿಯುವ ಕುಡ್ಪು, ಸಣ್ಣ- ದೊಡ್ಡದಾದ ಹೂವಿನ ಬುಟ್ಟಿ... ಮತ್ತೊಂದೆಡೆ ನಾಜೂಕಾಗಿ ಹೆಣೆಯುವ ಕೈಗಳು.

ಗುಡಿ ಕೈಗಾರಿಕೆ ಮಾಡಿ ಜೀವನ ಸಾಗಿಸುವವರು ಈ ಕಾಲ ಘಟ್ಟದಲ್ಲಿ ಅಪರೂಪ. ಆದರೂ, ಉಡುಪಿಯ ಕೋಟ, ಕಾವಡಿ, ಬ್ರಹ್ಮಾವರ, ಸಾಲಿಗ್ರಾಮ, ಪಾಂಗಾಳ, ಹಕ್ಲಾಡಿ, ನಾಡ, ಗುಡ್ಡೆಯಂಗಡಿ ಮುಂತಾದೆಡೆ ಇರುವ ಕೊರಗ ಜನಾಂಗ ಈಗಲೂ ಮೂಲ ಕಸುಬು ಮರೆತಿಲ್ಲ.

ಹೀಗಾಗಿ ಇವರ ಕಲಾತ್ಮಕತೆಯ ಶ್ರೀಮಂತಿಕೆ ಅನಾವರಣಗೊಳಿಸಬೇಕೆಂದು ಜಿಲ್ಲಾಡಳಿತ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಪ್ರಾತ್ಯಕ್ಷಿಕೆ- ಪ್ರದರ್ಶನ ಹಮ್ಮಿಕೊಂಡಿದೆ. 75 ಕ್ಕೂ ಅಧಿಕ ಮಂದಿ ಕೊರಗರು ಭಾಗಿಯಾಗಿದ್ದರು.

ಕಾಡಿನಿಂದ ಬಿದಿರು- ಬಳ್ಳಿ ಬಿಳಲು ಸಂಗ್ರಹಿಸಿ ಬುಟ್ಟಿ, ತೊಟ್ಟಿಲು, ಕೋಳಿ ಗೂಡು ಮೊದಲಾಗಿ 40ಕ್ಕೂ ಅಧಿಕ ದಿನೋಪಯೋಗಿ ವಸ್ತು ತಯಾರಿಯಲ್ಲಿ ಈ ಕೊರಗರು ಸಿದ್ಧಹಸ್ತರು. ಆದರೆ, ಇಂದು ಈ ಕಲೆ ಅಳಿವಿನಂಚಿಗೆ ತಲುಪಿದೆ. ಹೀಗಾಗಿ ಸರ್ಕಾರ ಪ್ರೋತ್ಸಾಹ ನೀಡಿದರೆ ನಮ್ಮ ಕುಲ ಕಸುಬು ಉಳಿಯಬಹುದು ಅಂತಾರೆ.

Edited By : Nagesh Gaonkar
PublicNext

PublicNext

01/03/2022 11:17 am

Cinque Terre

39.33 K

Cinque Terre

0

ಸಂಬಂಧಿತ ಸುದ್ದಿ