ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: 'ಯುವರತ್ನ'ನಿಗೆ ಯಕ್ಷಗಾನ ಸೊಬಗಿನಲ್ಲಿ "ಅಕ್ಷರ ಶ್ರದ್ಧಾಂಜಲಿ"

ಮುಲ್ಕಿ: ಕೋಟಿ ಕೋಟಿ ಅಭಿಮಾನಿಗಳ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಎರಡನೆಯ ಛಂದೋಬ್ರಹ್ಮ , ಛಂದೋವಾರಿಧಿ ಚಂದ್ರ ಗಣೇಶ ಕೊಲೆಕಾಡಿಯವರು ಬರೆದ ' ಅಕ್ಷರ ಶ್ರದ್ಧಾಂಜಲಿ ' ಭಾಮಿನಿಗಳ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ತೆಂಕುತಿಟ್ಟಿನ ಪ್ರಸಿದ್ಧ ಭಾಗವತರಾದ ಭವ್ಯಶ್ರೀ ಕುಲ್ಕುಂದ ಅವರು ಸುಶ್ರಾವ್ಯವಾಗಿ ಹಾಡಿದ್ದಾರೆ. ಬಡಗುತಿಟ್ಟಿನ ಪ್ರಸಿದ್ಧ ಹಿರಿಯ ಭಾಗವತರಾದ ಸುರೇಂದ್ರ ಪಣಿಯೂರ್ ವೀಡಿಯೊ ಎಡಿಟಿಂಗ್ ಮಾಡಿದ್ದು,

ಕೊಲೆಕಾಡಿಯವರ ಶಿಷ್ಯವೃಂದದವರೆಲ್ಲರೂ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯ ಪೂರ್ವಕವಾಗಿ ಶ್ರದ್ಧಾಂಜಲಿಯನ್ನು ಅರ್ಪಿಸಿದ ಈ ವಿಶೇಷ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By : Nagesh Gaonkar
Kshetra Samachara

Kshetra Samachara

11/11/2021 06:30 pm

Cinque Terre

16.9 K

Cinque Terre

0

ಸಂಬಂಧಿತ ಸುದ್ದಿ