ಮುಲ್ಕಿ: ಅವಿಭಾಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮಹಾಲಯ ಅಮಾವಾಸ್ಯೆ ಭಕ್ತಿ ಭಾವದಿಂದ ನಡೆಯಿತು.
ಬೆಳಗಿನಿಂದಲೇ ಮುಲ್ಕಿ, ಪಡುಬಿದ್ರೆ, ಬೆಳ್ಮಣ್, ಕಿನ್ನಿಗೋಳಿ ಸಹಿತ ವಿವಿಧೆಡೆಗಳಿಂದ ಸಾವಿರಾರು ಭಕ್ತರು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಹೆಜಮಾಡಿ ಸಮುದ್ರ ತೀರದಲ್ಲಿ ಸಮುದ್ರ ಸ್ನಾನ ಹಾಗೂ ಅಗಲಿದ ಪಿತೃಗಳಿಗೆ ಪುರೋಹಿತರಾದ ವೇ. ಮೂ.ಹರಿ ಭಟ್ ಹಾಗೂ ಅನಂತರಾಜ ಭಟ್ ನೇತೃತ್ವದಲ್ಲಿ ಕ್ಷೇತ್ರ ಪಿಂಡಪ್ರದಾನ ನಡೆಸಿದರು.
ಈ ಸಂದರ್ಭ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ಅನಂತರಾಜ ಭಟ್ ಮಹಾಲಯ ಅಮಾವಾಸ್ಯೆಯ ಪುಣ್ಯ ದಿನದಲ್ಲಿ ಅಗಲಿದ ಹಿರಿಯರಿಗೆ ಸದ್ಗತಿ ದೊರೆಯಲು, ಭಾರತದಲ್ಲಿರುವ ಪುಣ್ಯಕ್ಷೇತ್ರದ ತೀರ್ಥ ಕಡಲಿನಲ್ಲಿ ಸಂಗಮವಾಗುತ್ತಿದ್ದು, ಸಮುದ್ರ ಸ್ನಾನ ನಡೆಸಿ, ತಿಲ ಹೋಮ ಸಹಿತ ಪೂಜಾ ಕರ್ಮಗಳನ್ನು ನೆರವೇರಿಸಿ, ಪಿತೃದೇವತೆಗಳ ಅನುಗ್ರಹ ಪ್ರಾಪ್ತಿಯಾಗಿ ಶ್ರೇಯಸ್ಸು ಸಾಧ್ಯ ಎಂದರು.
Kshetra Samachara
25/09/2022 02:12 pm