ಮಂಗಳೂರು: ಗೋಕರ್ಣನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಧನಲಕ್ಷ್ಮಿ ಅವರು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
'ವಿವಿಧ ಹಂತದ ಸ್ವಾಭಿಮಾನ ಹೊಂದಿರುವ ಪ್ರೌಢಶಾಲಾ ವಿದ್ಯಾರ್ಥಿಗಳ ಜೀವನ ಕೌಶಲಗಳು,ಆಧ್ಯಾತ್ಮಿಕ ಬುದ್ಧಿವಂತಿಕೆ ಹಾಗೂ ಶೈಕ್ಷಣಿಕ ಸಾಧನೆಗಳ ಮೇಲೆ ಜೀವನ ಕೌಶಲ್ಯಗಳನ್ನು ಕಲಿಸುವ ವಿಭಿನ್ನ ವಿಧಾನಗಳ ಪರಿಣಾಮಕಾರಿತ್ವ’ ವಿಷಯದ ಕುರಿತು ಧನಲಕ್ಷ್ಮಿಯವರು ಪ್ರಬಂಧ ಮಂಡಿಸಿದ್ದರು.
ಮಂಗಳೂರಿನ ಸೇಂಟ್ ಆನ್ಸ್ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ. ವಿಜಯ ಕುಮಾರಿ ಎಸ್.ಎನ್ ಅವರ ಮಾರ್ಗ ದರ್ಶನದಲ್ಲಿ ಧನಲಕ್ಷ್ಮೀ ಅವರು ಈ ಪ್ರಬಂಧವನ್ನು ಮಂಡಿಸಿದ್ದರು.
Kshetra Samachara
27/09/2020 07:29 am