ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಕೌಶಲ್ಯ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿಯೇ ಸ್ಪೂರ್ತಿ ; ಪಿ ಎಸ್ ಯಡಪಡಿತ್ತಾಯ

ಉಳ್ಳಾಲ: ವಿದ್ಯಾರ್ಥಿಗಳು ಕೇವಲ ಓದು, ಉತ್ತಮ ಅಂಕಗಳನ್ನ ಪಡೆಯೋದು ಮಾತ್ರವಲ್ಲದೆ ತಮ್ಮೊಳಗಿರುವ ಕೌಶಲ್ಯ ಪ್ರದರ್ಶನ ಮಾಡಲು ಪ್ರತಿಭಾ ಕಾರಂಜಿಗಳು ಸ್ಫೂರ್ತಿಯಾಗಿದೆ ಎಂದು ಮಂಗಳೂರು ವಿ. ವಿ ಉಪಕುಲಪತಿ ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಂಪನ್ಮೂಲ ಕೇಂದ್ರ ಬಂಟ್ವಾಳ, ಜ್ಞಾನ ದೀಪ ಆಂಗ್ಲ ಮಾಧ್ಯಮ ಶಾಲೆ ಇದರ ಆಶ್ರಯದಲ್ಲಿ ಮುಡಿಪುವಿನಲ್ಲಿ ನಡೆದ ಮಂಚಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಪ್ರತಿಭಾ ಕಾರಂಜಿ, ಕಲೋತ್ಸವ 2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸೂರಜ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಡಾ.ಮಂಜುನಾಥ್ ರೇವಣ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುರ್ನಾಡು ಪಂಚಾಯತ್ ಅಧ್ಯಕ್ಷ ಗಣೇಶ್ ನಾಯಕ್, ಸದಸ್ಯ ಗೋಪಾಲ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

19/09/2022 06:55 pm

Cinque Terre

3.08 K

Cinque Terre

0

ಸಂಬಂಧಿತ ಸುದ್ದಿ