ಕುಂದಾಪುರ: ಯಾವುದೇ ವೃತ್ತಿಯಲ್ಲಿ ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ವಿಶೇಷವಾಗಿ ಶಿಕ್ಷಕ ವೃತ್ತಿಯವರಿಗೆ ಕಲಿಕೆ ನಿತ್ಯನಿರಂತರವಾಗಿದೆ. ಮುಂದಿನ ಯುವಜನಾಂಗವನ್ನು, ದೇಶದ ಭವಿಷ್ಯವನ್ನು ರೂಪಿಸುವ, ಸೃಷ್ಟಿಸುವ ಮಕ್ಕಳೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಹೆಚ್ಚು ಜಾಗರೂಕರಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಶಿಕ್ಷಕರಲ್ಲಿ ನಿಪುಣತೆ, ತರಬೇತಿ ಅತ್ಯಗತ್ಯವಾಗಿದ್ದು, ಮಕ್ಕಳಿಗೆ ಶಿಕ್ಷಣ ನೀಡಲು ಬೇಕಾಗುವ ಎಲ್ಲಾ ಶಿಕ್ಷಣವನ್ನು ಶಿಕ್ಷಕರು ಪಡೆದುಕೊಳ್ಳುತ್ತಿರಬೇಕು ಎಂದು ರೋಟರಿ ಜಿಲ್ಲೆ ವಲಯ ಒಂದರ ಅಸಿಸ್ಟೆಂಟ್ ಗವರ್ನರ್ ಡಾ.ಉಮೇಶ ಪುತ್ರನ್ ಹೇಳಿದರು.
ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದ ಸಹ ಪ್ರಾಯೋಜಕತ್ವದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಜರಗಿದ ’ಪ್ರೇರಣಾ 2022’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷೆ ಸುಗುಣಾ ಆರ್.ಕೆ. ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ ಶುಭಾಂಶನೆಗೈದರು. ಗಂಗೊಳ್ಳಿ ಸರಕಾರಿ ಉರ್ದು ಶಾಲೆಗೆ ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಕೊಡುಗೆ ನೀಡಲಾಯಿತು. ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು. ಸುಗುಣಾ ಆರ್.ಕೆ. ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಕೆ.ರಾಮನಾಥ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಚಂದ್ರಕಲಾ ತಾಂಡೇಲ ವಂದಿಸಿದರು.
Kshetra Samachara
03/09/2022 07:21 pm