ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರದಂಗವಾಗಿ ದಾನಿಗಳ ಮೂಲಕ ನಿರ್ಮಾಣಗೊಂಡ ಶ್ರೀ ಸುಬ್ರಹ್ಮಣ್ಯ ಸಭಾಭವನ ಕಟ್ಟಡದ ಭೋಜನಶಾಲೆಯ ಸಮರ್ಪಣೆ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ವಹಿಸಿ ಮಾತನಾಡಿ ದಾನಿಗಳ ಹಾಗೂ ಭಕ್ತರ ಸಹಕಾರದಿಂದ ದೇವಳದ ಜೀರ್ಣೋದ್ಧಾರ ಸಾಧ್ಯ ಎಂದರು.
ಅರ್ಚಕ ವೇ.ಮೂ. ಲಕ್ಷ್ಮಿ ನಾರಾಯಣ ಆಸ್ರಣ್ಣ ಚಾಲನೆ ನೀಡಿ ಮಾತನಾಡಿ, ದೇವಳದ ಅಭಿವೃದ್ಧಿಯಲ್ಲಿ ಅನ್ನದಾನ ಮಹತ್ವ ಪಡೆದಿದ್ದು, ಭೋಜನ ಶಾಲೆ ಮೂಲಕ ಕ್ಷೇತ್ರದ ಸಂಪತ್ತು ಇನ್ನಷ್ಟು ಹೆಚ್ಚಾಗಲಿ ಎಂದರು.
ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಶುಭಾಶಂಸನೆಗೈದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯಚಂದ್ರ ಜೈನ್, ಎಂಆರ್ ಪಿಎಲ್ ಸಿಎಸ್ಆರ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ವೀಣಾ ಟಿ. ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ತಿನ ಆಗಮ ವಿದ್ವಾಂಸ ಸೂರ್ಯನಾರಾಯಣ ಭಟ್ ಕಶೆಕೋಡಿ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಭುಜಂಗ ಎಂ.ಶೆಟ್ಟಿ, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ತೋಕೂರುಗುತ್ತು ಭಾಸ್ಕರ ಶೆಟ್ಟಿ, ದ.ಕ. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಬೊಳ್ಳೂರು, ತಾಪಂ ಸದಸ್ಯ ದಿವಾಕರ್ ಕರ್ಕೇರ ಭಾಗವಹಿಸಿದ್ದರು.
ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ,ಧಾರ್ಮಿಕ ಪರಿಷತ್ ಸದಸ್ಯರಾದ ಭುವನಾಭಿರಾಮ ಉಡುಪ, ಜೀರ್ಣೋದ್ದಾರ ಸಮಿತಿಯ ಗುರುರಾಜ ಎಸ್ .ಪೂಜಾರಿ ತೋಕೂರು,ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ ಪುನರೂರು,ಮೋಹನ್ ರಾವ್ ಹಳೆಯಂಗಡಿ ಉಪಸ್ಥಿತರಿದ್ದರು.
ನೂತನ ಭೋಜನಶಾಲೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಾದ ಸತ್ಯನಾರಾಯಣ ಭಟ್ ಪಡುಬಿದ್ರಿ,ರಾಜೀವಿ ಸೋಮಯಾಜಿ ಬಂಟ್ವಾಳ,ಮೋಹನ್ ರಾವ್ ಕಂಬಳ ಬೆಟ್ಟುತೋಕೂರು ಹಾಗೂ ಗುತ್ತಿಗೆದಾರ ಗೋಪಾಲ ಸ್ವಾಮಿ ಅವರನ್ನು ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿದಾಸ್ ಭಟ್ ಸ್ವಾಗತಿಸಿದರು. ಹೇಮನಾಥ ಆಮೀನ್ ನಿರೂಪಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಎಲ್.ಕೆ.ಸಾಲ್ಯಾನ್ ವಂದಿಸಿದರು.
Kshetra Samachara
18/12/2020 12:29 pm