ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೊಲಕಾಡಿ ಶ್ರೀ ಕುಂಜಾರುಗಿರಿ ದೇವಸ್ಥಾನದಲ್ಲಿ ಸಂಭ್ರಮದ ದೀಪೋತ್ಸವ

ಮುಲ್ಕಿ: ಮುಲ್ಕಿ ಸಮೀಪದ ಶ್ರೀ ಕುಂಜಾರುಗಿರಿ ದೇವಸ್ಥಾನದಲ್ಲಿ ದೀಪೋತ್ಸವ ಸಂಭ್ರಮದಿಂದ ನಡೆಯಿತು.ದೀಪೋತ್ಸವದ ಪ್ರಯುಕ್ತ ತಾಳಮದ್ದಳೆ ಕಾರ್ಯಕ್ರಮವನ್ನು ಮುಂಬೈ ಬಿಲ್ಲವ ಅಸೋಸಿಯೇಶನ್ ಮಹಿಳಾ ಮಂಡಳಿ ಉಪಾಧ್ಯಕ್ಷೆ ಪ್ರಭಾ ಕೆ ಬಂಗೇರ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ದೇವಳದ ಆಡಳಿತ ಮೊಕ್ತೇಸರ ಗೋಪಿನಾಥ ಪಡ೦ಗ ವಹಿಸಿ ಮಾತನಾಡಿ ದೀಪಾರಾಧನೆ ಮೂಲಕ ಎಲ್ಲರಿಗೂ ಶುಭವಾಗಲಿ ಹಾಗೂ ಕೊರೋನಾ ವಿಶ್ವ ದಿಂದಲೇ ನಿರ್ಮೂಲನೆಯಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ದೇವಳದ ಅರ್ಚಕ ಶ್ರೀಕಾಂತ್ ಭಟ್, ಬಪ್ಪನಾಡು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ, ಯಕ್ಷರಂಗದ ಗಣೇಶ ಕೊಲಕಾಡಿ, ಕುಂಜಾರುಗಿರಿ ಯುವಕ ಸಂಘದ ಅಧ್ಯಕ್ಷ ಅಣ್ಣು ಕೋಟ್ಯಾನ್ ಮೈಲೊಟ್ಟು, ಸುಧಾಕರ ಅಂಚನ್ ಪರಂಕಿಲ, ಮನೋಹರ ಕೋಟ್ಯಾನ್ ಕೊಲಕಾಡಿ, ರಂಜನ್ ಶೆಟ್ಟಿ ಕೆಂಪುಗುಡ್ಡೆ, ಶಂಕರ್ ಪಡ೦ಗ, ಯತೀಶ್ ಕೊಲಕಾಡಿ ಮತ್ತಿತರರು ಉಪಸ್ಥಿತರಿದ್ದರು. ಗಿರಿಧರ ಕಾಮತ್ ಕೆದುಬರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಗಣೇಶ ಕೊಲಕಾಡಿ ವಿರಚಿತ ಶ್ರೀರಾಮ ನಿರ್ಯಾಣ ಅಮೋಘ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

Edited By : Nagesh Gaonkar
Kshetra Samachara

Kshetra Samachara

14/12/2020 07:21 pm

Cinque Terre

9.86 K

Cinque Terre

0

ಸಂಬಂಧಿತ ಸುದ್ದಿ