ಸುಬ್ರಹ್ಮಣ್ಯ: ವಿಶ್ವ ಪ್ರಸಿದ್ದ ಸುಬ್ರಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ನಕ್ಷತ್ರ ದಿನವಾದ ಭಾನುವಾರ ಭಾರಿ ಸಂಖ್ಯೆಯಲ್ಲಿ ಜನಸಂದಣಿ ಕಂಡು ಬಂದಿದೆ. ಆಶ್ಲೇಷ ಪೂಜೆ ನೆರವೇರಿಸಲು ರಾಜ್ಯ,ಅಂತರರಾಜ್ಯಗಳಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇಗುಲದ ರಥ ಬೀದಿ,ರಸ್ತೆಗಳು ಸೇರಿದಂತೆ ಹೊರಾಂಗಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿರುವ ವಿವಿಧ ಕಡೆಗಳಿಂದ ಆಗಮಿಸಿದ ಭಕ್ತರು ಕೌಂಟರ್ ಬಳಿ ರಶೀದಿಗಾಗಿ ಗಲಾಟೆ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಆದರೆ ದೇಗುಲದಿಂದ ಸೀಮಿತ ಸಂಖ್ಯೆಯಲ್ಲಿ ಸೇವಾ ರಶೀದಿಗಳು ವಿತರಿಸುತ್ತಿರುವುದರಿಂದ ದೂರದೂರಿಂದ ಬಂದ ಭಕ್ತರಿಗೆ ರಶೀದಿ ಸಿಗದೆ ಸೇವಾ ಕೌಂಟರ್ ಸಿಬ್ಬಂದಿಗಳ ಜತೆ ವಾಗ್ವಾದಗಳೂ ನಡೆಯುತ್ತಿದೆ.
ಭಕ್ತರು ರಥಬೀದಿಯುದ್ದಕ್ಕೂ ಸಾಲಾಗಿ ನಿಂತಿದ್ದರು. ಮಧ್ಯರಾತ್ರಿ 12 ಗಂಟೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ಕಂಡು ಬಂತು.
Kshetra Samachara
06/12/2020 02:24 pm