ಮುಲ್ಕಿ: ಹಿಂದೂ ಯುವಸೇನೆ ಹಾಗೂ ಮಹಿಳಾ ಮಂಡಳಿ ಮುಲ್ಕಿ ಘಟಕ ಮತ್ತು ಎಸ್. ಎಸ್. ಫ್ರೆಂಡ್ಸ್ ಮುಲ್ಕಿ ಜಂಟಿ ಆಶ್ರಯದಲ್ಲಿ ಹಿಂದೂ ಸಂಘಟನೆಯ ನಾಯಕ ದಿ. ಸುಖಾನಂದ ಶೆಟ್ಟಿ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಮುಲ್ಕಿ ಹೋಟೆಲ್ ಆದಿ ಧನ್ ಸಭಾಭವನದಲ್ಲಿ ನಡೆಯಿತು. ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ರಕ್ತದಾನ ಶ್ರೇಷ್ಠ ದಾನವಾಗಿದ್ದು, ಹಿಂದುತ್ವಕ್ಕಾಗಿ ಹೋರಾಡಿದ ದಿ. ಸುಖಾನಂದ ಶೆಟ್ಟಿಯವರ ಸ್ಮರಣಾರ್ಥ ಬಡ ವರ್ಗದವರ ಕಣ್ಣೀರೊರೆಸುವ ಸಂಘಟನೆಗಳ ಕ್ರಿಯಾಶೀಲ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಲ್ಕಿ ನ.ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಶೈಲೇಶ್ ಕುಮಾರ್, ರಾಧಿಕಾ ಕೋಟ್ಯಾನ್,ದ.ಕ.ಜಿಲ್ಲಾ ಹಿಂದು ಯುವಸೇನೆ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ,ಮುಲ್ಕಿ ಹಿಂದೂ ಯುವಸೇನೆ ಅಧ್ಯಕ್ಷ ಅಶ್ವಥ್ ಕೊಲಕಾಡಿ, ಮಹಿಳಾ ಘಟಕ ಅಧ್ಯಕ್ಷೆ ನೀರಜಾಕ್ಷಿ ಅಗ್ರವಾಲ್, ಮುಲ್ಕಿ-ಮೂಡಬಿದ್ರೆ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಡಾ. ಹರಿಶ್ಚಂದ್ರ ಸಾಲ್ಯಾನ್, ಸುಖಾನಂದ ಶೆಟ್ಟಿ ಅಭಿಮಾನಿ ಬಳಗದ ಈಶ್ವರ್ ಕಟೀಲ್, ರಮಾನಾಥ ಪೈ, ಕಮಲಾಕ್ಷ ಬಡಗಿತ್ಲು ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಕೊಲ್ನಾಡು ನಿರೂಪಿಸಿದರು.
Kshetra Samachara
01/12/2020 12:24 pm