ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೊರೋನಾ ನಡುವೆಯೂ ಸಹಕಾರಿ ಸಂಘದ ಕಾರ್ಯವೈಖರಿ ಶ್ಲಾಘನೀಯ:ಗೋಪಿನಾಥ ಪಡಂಗ

ಮುಲ್ಕಿ: ಮುಲ್ಕಿ ಕ್ಷೀರಸಾಗರ ವಿವಿದ್ದೋದೇಶ ಸಹಕಾರಿ ಸಂಘ (ಲಿ) ನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಗೋಪಿನಾಥ ಪಡಂಗ ನೇತೃತ್ವದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ ಸಂಘದ ನಿರ್ದೇಶಕರ ಗ್ರಾಹಕರ ಹಾಗೂ ಸದಸ್ಯರ ಸಹಕಾರದೊಂದಿಗೆ ಕೊರೋನಾ ನಡುವೆಯೂ ಸುಮಾರು 19 ಲಕ್ಷ ಲಾಭದಲ್ಲಿ ಮುನ್ನಡೆದಿದ್ದು ಮುಂದಿನ ದಿನಗಳಲ್ಲಿ ಸಂಘಕ್ಕೆ ನೂತನ ಕಟ್ಟಡ ರಚನೆ ಸಹಿತ ಹಲವು ಅಭಿವೃದ್ಧಿ ಕಾರ್ಯಗಳಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುರಾಜ್ ಆಡಳಿತ ಮಂಡಳಿಯ ವರದಿ ಹಾಗೂ ವರ್ಷದ ಲೆಕ್ಕಪತ್ರವನ್ನು ಮಂಡಿಸಿದರು. ಸಂಘದ ಸದಸ್ಯ ಅಬ್ದುಲ್ ರಝಾಕ್ ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಿಬ್ಬಂದಿಗಳಿಗೆ ಪ್ರೋತ್ಸಾಹಧನ ನೀಡಬೇಕೆಂದು ವಿನಂತಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಲಿಡಿಯಾ ಫುಟಾಡೊ ,ನಿರ್ದೇಶಕರಾದ ಸುಧಾಕರ ಶೆಟ್ಟಿ, ಹರೀಂದ್ರ ಸುವರ್ಣ, ರಮೇಶ್ ಕೋಟ್ಯಾನ್, ಮೋಹನದಾಸ್, ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

27/11/2020 10:31 am

Cinque Terre

13.45 K

Cinque Terre

0

ಸಂಬಂಧಿತ ಸುದ್ದಿ