ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ನ.27ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ತಿರುಗಾಟ

ಮುಲ್ಕಿ: ತೆಂಕುತಿಟ್ಟಿನ ಖ್ಯಾತ ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ತಿರುಗಾಟವನ್ನು ನ. 27ರಿಂದ ಆರಂಭಿಸಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್ ಪಾವಂಜೆ ಜ್ಞಾನಶಕ್ತಿ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅವರು ಮಾತನಾಡಿ, ನಿರಂತರವಾಗಿ ಯಕ್ಷಗಾನ ಪ್ರೋತ್ಸಾಹಿಸುತ್ತಿರುವ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ನಾಗವೃಜ ಕ್ಷೇತ್ರ ಪಾವಂಜೆ ತನ್ನದೇ ಆದ ಮೇಳವನ್ನು ಸಮರ್ಥವಾಗಿ ಸಂಯೋಜಿಸಿದ್ದು, ನೂತನ ಮೇಳದ ಆರಂಭ ನ. 27ರ ಮಧ್ಯಾಹ್ನ 1 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆರಂಭಿಸಲಿದೆ ಎಂದರು. ಮಧ್ಯಾಹ್ನ 1 ಗಂಟೆಯಿಂದ ಉಭಯ ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ "ಯಕ್ಷಗಾನಾರಾಧನೆ" ನಡೆಯಲಿದೆ. 3: 30ಕ್ಕೆ ಶ್ರೀ ದೇವಳದಿಂದ ಚೌಕಿಗೆ ಸಾಗುವ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿಯ ಭವ್ಯ ಮೆರವಣಿಗೆಯಲ್ಲಿ ಭಕ್ತಾಭಿಮಾನಿಗಳು, ಕೊಡುಗೈ ದಾನಿಗಳು ಸೇವಾರೂಪದಲ್ಲಿ ನೀಡಿದ ಶ್ರೀ ದೇವರ ಬೆಳ್ಳಿಯ ಪ್ರಭಾವಳಿ, ಉಯ್ಯಾಲೆ ಕಿರೀಟ, ಚಕ್ರ, ಗದೆ ಇನ್ನಿತರ ವಸ್ತು ದೇವರಿಗೆ ಸಮರ್ಪಿಸಲಾಗುವುದು. ಸಂಜೆ 4 ರಿಂದ ಧಾರ್ಮಿಕ ಸಭೆ ವೇದ ಕೃಷಿಕ ಶ್ರೀ ಕೆಎಸ್ ನಿತ್ಯಾನಂದ ವೇದ ವಿಜ್ಞಾನ ಮಂದಿರ ಚಿಕ್ಕಮಗಳೂರು ಅವರ ಶುಭಾಶಂಸನೆ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾಗೂ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕ್ಷೇತ್ರದ ಸಾಧಕರ ಉಪಸ್ಥಿತಿಯಲ್ಲಿ ನಡೆಯಲಿದೆ.

ಶ್ರೀ ಕ್ಷೇತ್ರದ ಯಕ್ಷಗಾನ ಮಂಡಳಿ ಬಯಲಾಟ ಕಾಲಮಿತಿಯದ್ದಾಗಿದ್ದು, ಅದೇ ದಿನ ಕಲಾವಿದರಿಂದ "ಪಾಂಡವಾಶ್ವಮೇಧ" ಸೇವಾ ಬಯಲಾಟ ನಡೆಯಲಿದೆ ಎಂದರು. ಮೇಳದ ಸಾರಥ್ಯ ವಹಿಸಲಿರುವ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಈಗಾಗಲೇ ಅವಿಭಜಿತ ದ.ಕ. ಜಿಲ್ಲೆ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಸೇರಿಸಿ 150ಕ್ಕೂ ಹೆಚ್ಚು ಸೇವೆಯಾಟ ಬುಕ್ಕಿಂಗ್ ಆಗಿದ್ದು, ಕಾಲಮಿತಿಯಲ್ಲಿ ನಡೆಯಲಿದೆ. ಮೇಳದಲ್ಲಿ 38 ಕ್ಕೂ ಹೆಚ್ಚು ಕಲಾವಿದರಿದ್ದಾರೆ. ಮೇ 26 ರ ವರೆಗೆ ಈಗಾಗಲೇ ಯಕ್ಷಗಾನ ಬುಕಿಂಗ್ ಆಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಧರ್ಮದರ್ಶಿ ಡಾ.ಯಾಜಿ ನಿರಂಜನ ಭಟ್ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

23/11/2020 07:39 pm

Cinque Terre

15.02 K

Cinque Terre

0

ಸಂಬಂಧಿತ ಸುದ್ದಿ