ಉಡುಪಿ: ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಂತ್ರಾಲಯದಲ್ಲಿ ಶನಿವಾರ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಮತ್ತು ತಮ್ಮ ಶಿಷ್ಯರೊಂದಿಗೆ ಹನ್ನೆರಡು ವರ್ಷಗಳಿಗೊಮ್ಮೆ ಬರುವ ಪವಿತ್ರ ತುಂಗಭದ್ರಾ ಪುಷ್ಕರ ಸ್ನಾನಗೈದರು.
ಬಳಿಕ ಗುರುರಾಯರ ದರ್ಶನ ಪಡೆದು ಕೆಲಹೊತ್ತು ರಾಯರ ಸನ್ನಿಧಿಯ ಮುಂಭಾಗ ವಿದ್ಯಾರ್ಥಿಗಳಿಗೆ ಶ್ರೀ ಮನ್ನ್ಯಾಯ ಸುಧಾ ಪಾಠ ಮಾಡಿದರು.
ಅಯೋಧ್ಯೆಯ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರುವಂತೆ ಗುರುರಾಯರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಶ್ರೀಗಳವರನ್ನು ಶ್ರೀ ಮಠದ ಸಾಂಪ್ರದಾಯಿಕ ಗೌರವಗಳೊಂದಿಗೆ ಬರಮಾಡಿಕೊಂಡ ಶ್ರೀ ಸುಬುಧೇಂದ್ರ ತೀರ್ಥರು ಶ್ರೀ ಮಠದ ಗೌರವವನ್ನು ಸಲ್ಲಿಸಿ ರಾಮಮಂದಿರ ನಿರ್ಮಾಣ ಕಾರ್ಯಗಳ ಕುರಿತು ಸಮಾಲೋಚನೆ ನಡೆಸಿದರು.
Kshetra Samachara
21/11/2020 04:13 pm