ಮುಲ್ಕಿ: ಕಳೆದ 50 ವರ್ಷಗಳಿಂದ ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಗ್ರಾಮಸ್ಥರ ಬಹು ದಿನಗಳ ಬೇಡಿಕೆಯ ಬಲವಿನ ಗುಡ್ಡೆ - ಮಲ್ಲಿಗೆಯಂಗಡಿ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಚಾಲನೆ ನೀಡಿದರು.
ಈ ಸಂದರ್ಭ ನಳಿನ್ ಮಾತನಾಡಿ, ಕಟೀಲು ಗ್ರಾಪಂ ವ್ಯಾಪ್ತಿಯ ಮಲ್ಲಿಗೆಯಂಗಡಿ - ಬಲವಿನಗುಡ್ಡೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಪಿಡಬ್ಲ್ಯೂಡಿ ಇಲಾಖೆಯಿಂದ ಸುಮಾರು 1 ಕೋಟಿ 15 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ಬಲವಿನ ಗುಡ್ಡೆ ಯಿಂದ ಕಟೀಲು ಮಲ್ಲಿಗೆ ಅಂಗಡಿ ರಸ್ತೆ ಸಂಪರ್ಕದ ಗ್ರಾಮಸ್ಥರ ಕನಸು ಸಾಕಾರಗೊಳ್ಳುತ್ತಿದೆ ಎಂದರು. ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಈ ಭಾಗದ ಗ್ರಾಮಸ್ಥರಿಗೆ, ವಿದ್ಯಾರ್ಥಿಗಳಿಗೆ ಸುತ್ತು ಬಳಸಿ ಕಿನ್ನಿಗೋಳಿ ಮೂಲಕ ಕಟೀಲು ಕಡೆಗೆ ಸಂಚರಿಸಬೇಕಿದ್ದು ಪಕ್ಷಿಕೆರೆ ಅತ್ತೂರು ಶಿಬರೂರು ಗ್ರಾಮಸ್ಥರಿಗೆ ನೂತನ ರಸ್ತೆ ಕೊಂಡಿ ಆಗಲಿದೆ ಎಂದರು.
ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ,ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ,ತಾಪಂ ಸದಸ್ಯೆ ಶುಭಲತಾ, ಬಿಜೆಪಿ ಮುಖಂಡರಾದ ಕಿರಣ್ ಶೆಟ್ಟಿ, ಜನಾರ್ದನ ಕಿಲೆಂಜೂರು, ದೇವಿಪ್ರಸಾದ್ ಶೆಟ್ಟಿ, ಕೇಶವ ಕರ್ಕೇರ, ಲೋಕೇಶ್ ಶೆಟ್ಟಿ, ಕಲ್ಪೇಶ್ ಶೆಟ್ಟಿ ಸುಧೀರ್ ಶೆಟ್ಟಿ, ಸಂಜಿತ್ ಶೆಟ್ಟಿ ಮತ್ತಿತರರು ಇದ್ದರು.
Kshetra Samachara
18/11/2020 09:05 am