ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ : ವಿಜಯ ರೈತ ಸೊಸೈಟಿ ಯಲ್ಲಿ ಸಂಭ್ರಮದ ದೀಪಾವಳಿ ಆಚರಣೆ

ಮುಲ್ಕಿ: ಕೊರೊನಾ ಮಹಾಮಾರಿಯ ನಡುವೆಯೂ ಸಹಕಾರಿ ತತ್ವಗಳನ್ನು ಪಾಲಿಸಿಕೊಂಡು ಕಷ್ಟದಲ್ಲಿರುವ ಕೃಷಿಕರಿಗೆ ಕೃಷಿ ಸಲಕರಣೆಗಳು ಸಹಿತ ದವಸಧಾನ್ಯಗಳ ವಿತರಣೆ ಮಾಡಿ ಮಾದರಿಯಾದ ಮೂಲ್ಕಿ ವಿಜಯಾ ರೈತ ಸೇವಾ ಸಹಕಾರಿ ಸಂಘದ ಕಾರ್ಯವೈಖರಿ ಶ್ಲಾಘನೀಯ ಎಂದು ವಿಜಯ ರೈತಸಂಘದ ಆಡಳಿತ ಅಧಿಕಾರಿ ಜೋಸನ್ ಫುಟಾಡೋ ಹೇಳಿದರು. ಅವರು ಮುಲ್ಕಿ ವಿಜಯ ರೈತ ಸೇವಾ ಸಹಕಾರಿ ಸಂಘದಲ್ಲಿ ದೀಪಾವಳಿ ಆಚರಣೆಯಲ್ಲಿ ಮಾತನಾಡಿದರು.

ಬಪ್ಪನಾಡು ದೇವಳದ ಅರ್ಚಕರಾದ ನರಸಿಂಹ ಭಟ್ ಪೂಜೆ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆವಹಿಸಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಮಾತನಾಡಿ ಗ್ರಾಹಕರ ಹಾಗೂ ಕೃಷಿಕರಿಂದ ಸಂಘ ಬಲಗೊಂಡಿದ್ದು ಕೃಷಿಕ ರ ಶ್ರೇಯೋಭಿವೃದ್ಧಿ ಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಸಹಕಾರಿ ಸಂಘದ ಉಪಾಧ್ಯಕ್ಷರಾದ ಪ್ರಸಾದ ಅಜಿಲ, ನಿರ್ದೇಶಕ ನರಸಿಂಹ ಪೂಜಾರಿ, ರಾಮಮೂರ್ತಿ ಭಟ್, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

17/11/2020 07:40 am

Cinque Terre

16.17 K

Cinque Terre

0

ಸಂಬಂಧಿತ ಸುದ್ದಿ