ಮಂಗಳೂರು: ಸೊಡಾಲಿಟಿ ಆಫ್ ದಿ ಇಮ್ಯಾಕುಲೇಟ್ ಕನ್ಸೆಪ್ಶನ್ ಆಫ್ ದಿ ಬ್ಲೆಸ್ಡ್ ವರ್ಜಿನ್ ಮೇರಿ ಕ್ಯಾಥೋಲಿಕ್ ಸೆಂಟರ್ ಮಂಗಳೂರು ವತಿಯಿಂದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಂಗಳೂರಿನ ಬಿಷಪ್ ಹೌಸ್ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಫಾ.ಪೀಟರ್ ಪೌಲ್ ಸಲ್ಡಾನ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, "ಸೊಡಾಲಿಟಿ ಆಫ್ ದಿ ಇಮ್ಯಾಕುಲೇಟ್ ಕನ್ಸೆಪ್ಶನ್ ಆಫ್ ದಿ ಬ್ಲೆಸ್ಡ್ ವರ್ಜಿನ್ ಮೇರಿ ಕ್ಯಾಥೋಲಿಕ್ ಸೆಂಟರ್ ಸಂಸ್ಥೆ ಮೇರಿ ಮಾತೆ ಹೆಸರಿನಲ್ಲಿ ಮಾಡುವ ಕಾರ್ಯ ನಿಜಕ್ಕೂ ಶ್ಲಾಘನೀಯ, ಈ ಸಂಸ್ಥೆ ಜಿಲ್ಲೆಯ ಅದೆಷ್ಟೋ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಎಂಟು ಲಕ್ಷಕ್ಕೂ ಅಧಿಕ ಮೊತ್ತವನ್ನು ಸೇವಾ ಮನೋಭಾವದಿಂದ ನೀಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ. ಮಾತ್ರವಲ್ಲದೆ, ಇಲ್ಲಿ ದೊರಕಿದ ವೇತನ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಇನ್ನೊಬ್ಬರಿಗೆ ತಾವು ನೆರವಾಗುವಂತಾಗಲಿ. ಇಲ್ಲಿ ಪಡೆದ ವೇತನ ಕೃತಜ್ಞತಾ ಮನೋಭಾವದಿಂದ ಪಡೆದು ಮುಂದೆ ತಾವು ಇತರರಿಗೆ ನೆರವಾಗುವಂತಾಗಲಿ" ಎಂದು ಶುಭ ಹಾರೈಸಿದರು.
ಸಂತ ಅಲೋಶಿಯಸ್ ಕಾಲೇಜು ರೆಕ್ಟರ್ ಫಾ. ಮೆಲ್ವನ್ ಪಿಂಟೊ, ಸೊಡಾಲಿಟಿ ಆಫ್ ದಿ ಇಮ್ಯಾಕುಲೇಟ್ ಕನ್ಸೆಪ್ಶನ್ ಆಫ್ ದಿ ಬ್ಲೆಸ್ಡ್ ವರ್ಜಿನ್ ಮೇರಿ ಕ್ಯಾಥೋಲಿಕ್ ಸೆಂಟರ್ ಮಂಗಳೂರು ಅಧ್ಯಕ್ಷ ವಿವಿಯನ್ ಸಿಕ್ವೇರ, ಉಪಾಧ್ಯಕ್ಷ ಬೆನಡಿಕ್ಟ್ ಮಿನೇಜಸ್, ಕೋಶಾಧಿಕಾರಿ ಸುಶೀಲ್ ನೊರೊನ್ಹಾ, ಕಾರ್ಯಕ್ರಮ ನಿರೂಪಕ ಜಾನ್ ಡಿಸಿಲ್ವ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
08/11/2020 11:52 am