This is a modal window.
Beginning of dialog window. Escape will cancel and close the window.
End of dialog window.
ಕಾಪು: 2019-20 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 98.24 ಅಂಕ ಗಳಿಸಿದ್ದ ಕಾಪು ಕಲ್ಯದ ನಿವಾಸಿ ಉಮೇಶ್ ಆಚಾರ್ಯ- ಲೀಲಾವತಿ ಆಚಾರ್ಯ ಅವರ ಪುತ್ರಿ ವೈ. ಯು. ಯಶಸ್ವಿ ಆಚಾರ್ಯ ಅವರಿಗೆ ಕಾಪು ಪುರಸಭೆ ವತಿಯಿಂದ ಶನಿವಾರ ಸನ್ಮಾನಿಸಲಾಯಿತು.
ಯಶಸ್ವಿ ಆಚಾರ್ಯ ಕಾಪುವಿನ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿಯಾಗಿದ್ದು, ಭರತನಾಟ್ಯ ಸಹಿತ ಸಾಂಸ್ಕೃತಿಕ ಹಾಗೂ ಕ್ರೀಡಾರಂಗದಲ್ಲಿಯೂ ಸಾಧಕಿಯಾಗಿದ್ದಾರೆ. ಇವರ ಶೈಕ್ಷಣಿಕ ಸಾಧನೆ ಗುರುತಿಸಿ ಶ್ರೀಮತಿ ದಾಸಪ್ಪ ಶೆಣೈ ಪ್ರತಿಷ್ಠಾನ ಇತ್ತೀಚೆಗೆ ದಾವಣಗೆರೆಯ ಸಿದ್ಧಗಂಗಾ ವಿದ್ಯಾ ಸಂಸ್ಥೆ ಆವರಣದಲ್ಲಿ ಸರಸ್ವತಿ ಪುರಸ್ಕಾರ ನೀಡಿ ಗೌರವಿಸಿತ್ತು.
ಕಾಪು ಶಾಸಕ ಲಾಲಾಜಿ ಮೆಂಡನ್, ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಪುರ ಸಭಾಧಿಕಾರಿ ವೆಂಕಟೇಶ್ ನಾವಡ, ಉಪಾಧ್ಯಕ್ಷೆ ಮಾಲಿನಿ, ಸದಸ್ಯರು ಉಪಸ್ಥಿತರಿದ್ದರು.
Kshetra Samachara
07/11/2020 05:37 pm