ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ದೇವರ ಆಟದ ಜೀವ ಸೃಷ್ಟಿಯ ಧ್ವನಿ ಬೆಳಕು ನಾಟ್ಯದೊಳಗೆ ಅಡಗಿದೆ : ಡಾ.ಗಣೇಶ್ ಅಮೀನ್ ಸಂಕಮಾರ್

ಮಂಗಳೂರು:ಮನುಷ್ಯ ದೇಹದೊಳಗೆ ಅಡಗಿರುವ. ಧ್ವನಿ ಬೆಳಕಿನ ಆಟವಿಲ್ಲದೆ ಯಾವ ನಾಟ್ಯವೂ ಪ್ರಪಂಚದೊಳಗೆ ಇಲ್ಲ. ಎಂದು ಜನಪದ ವಿದ್ವಾಂಸರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಹೇಳಿದರು. ಅವರು ಮಂಗಳೂರಿನ ನಾಟ್ಯಾರಾದನಾ ಕಲಾ ಕೇಂದ್ರದ 30ನೇ ವರ್ಷದ ಸಂಭ್ರಮ ತ್ರಿಂಶೋತ್ಸವದ ಸರಣಿ ಕಾರ್ಯಕ್ರಮ "ನೃತ್ಯಾಮೃತ 12" ಭರತನಾಟ್ಯದೊಳಗಿನ ಧ್ವನಿ ಮತ್ತು ಬೆಳಕು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂತ ಅಲೋಶಿಯಸ್ ಪರಿಗಣಿತ ವಿಶದವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಎಲ್ ಸಿ ಆರ್ ಐ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದ ಉದ್ಘಾಟನೆಯನ್ನು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕಿ ಸುಭದ್ರ ರಾವ್ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ರಂಗ ಕಲಾವಿದ ರಂಗ ನಿರ್ದೇಶಕ ನೀನಾಸಂ ತರಬೇತುಗಾರ ಬೆಳಕು ವಿನ್ಯಾಸದ ಕಲಾಗಾರ ಕ್ರಿಸ್ಟೋಫರ್ ಡಿಸೋಜ ನಿನಾಸಂ ಭಾಗವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಳ್ಳಾಲ

ನೃತ್ಯ ಸೌರಭ ನಾಟ್ಯಲಯದ ನಿರ್ದೇಶಕರಾದ ವಿ. ಪ್ರಮೋದ್ ಕುಮಾರ್, ನಾಟ್ಯಾರಾದನ ಕಲಾಕೇಂದ್ರದ ಪ್ರಧಾನ ಟ್ರಷ್ಟಿ ವಿದುಷಿ ಸುಮಂಗಲಾ ರತ್ನಾಕರ ರಾವ್ , ಧರಿತ್ರಿ ಭಿಡೆ,ಕಲಾಕೇಂದ್ರದ ಟ್ರಸ್ಟಿ , ರತ್ನಾಕರ ರಾವ್ ತ್ರಿಂಶೋತ್ಸವ ಸಮಿತಿಯ ಉಪಾಧ್ಯಕ್ಷ ಬೈಕಾಡಿ ಶ್ರೀನಿವಾಸರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/11/2024 06:09 am

Cinque Terre

948

Cinque Terre

0