", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/286525-1738066941-WhatsApp-Image-2025-01-28-at-5.52.10-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಲ್ಪೆ: ಕರಾವಳಿಯಲ್ಲಿ ಸಾಂಪ್ರದಾಯಕವಾಗಿ ನಡೆಸುವ ಕೈರಂಪಣಿ ಮೀನುಗಾರರಿಗೆ ಬಂಪರ್ ಫಸಲು ದೊರೆತಿದೆ. ಉಡುಪಿಯ ಪಡುಕೆರೆಯಲ್ಲಿ ಭರಪೂರ ಮೀನುಗಳು ಬಲೆಗ...Read more" } ", "keywords": "Malpe, Fishermen Bonanza, Fishing Net, Fish Catch, Bumper Harvest, Karnataka News, Malpe News, Udupi News, Fishing Industry, Seafood.,Udupi,Mangalore,Cultural-Activity", "url": "https://publicnext.com/node" }
ಮಲ್ಪೆ: ಕರಾವಳಿಯಲ್ಲಿ ಸಾಂಪ್ರದಾಯಕವಾಗಿ ನಡೆಸುವ ಕೈರಂಪಣಿ ಮೀನುಗಾರರಿಗೆ ಬಂಪರ್ ಫಸಲು ದೊರೆತಿದೆ. ಉಡುಪಿಯ ಪಡುಕೆರೆಯಲ್ಲಿ ಭರಪೂರ ಮೀನುಗಳು ಬಲೆಗೆ ಬಿದ್ದಿವೆ. ಲಕ್ಷಾಂತರ ರೂಪಾಯಿಯ ಭೂತಾಯಿ ಮೀನು ಬಲೆಗೆ ಬಿದ್ದು ಬಡಮೀನುಗಾರರಿಗೆ ಲಾಟರಿ ಹೊಡೆದಂತಾಗಿದೆ.
ಸಾಮಾನ್ಯವಾಗಿ ಕೈರಂಪಣಿ ಮೀನುಗಾರಿಕೆ ನಡೆಸುವ ಬಡ ಮೀನುಗಾರರು , ಕಾರ್ಮಿಕರು 10 ರಿಂದ 15 ಜನರ ತಂಡ ಕಟ್ಟಿಕೊಂಡು ಕೈರಂಪಣಿ ಮೀನುಗಾರಿಕೆಯನ್ನು ನಡೆಸುತ್ತಾರೆ. ಸಮುದ್ರ ತೀರದಿಂದ 2 ರಿಂದ 3 ನಾಟಿಕಲ್ ದೂರದವರೆಗೆ ಕೈರಂಪಣಿ ಬಲೆಹಾಕಿ ಮೀನುಗಾರಿಕೆಯನ್ನು ನಡೆಸುತ್ತಾರೆ.
ಸಣ್ಣ ದೋಣಿಗಳ ಮೂಲಕ ಸಾಗಿ ಬಲೆ ಬೀಸಿ ಕೆಲವು ಗಂಟೆಗಳ ನಂತರ ದಡದಿಂದಲೇ ಬಲೆಯನ್ನು ಎಳೆಯುತ್ತಾರೆ. ಅದರ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು ಅಪರೂಪ. ಆದರೆ ಮಲ್ಪೆಯ ಪಡುಕೆರೆ ಬೀಚ್ನಲ್ಲಿ ಕೈರಂಪಣಿ ಬಲೆ ಬೀಸಿದ ಮೀನುಗಾರರ ಅದೃಷ್ಟ ಖುಲಾಯಿಸಿತ್ತು.
ಭೂತಾಯಿ ಮೀನುಗಳ ಗುಂಪು ಕೈರಂಪಣಿ ಬಲೆ ಬಿದ್ದಿದೆ. ಕೈರಂಪಣಿ ಮೀನುಗಾರರಿಗೆ ಒಂದು ದಿನದ ಮಟ್ಟಿಗೆ ಜೇಬು ತುಂಬುವ ಸಂಪಾದನೆಯಾದರೆ ತಾಜಾ ಮೀನು ತಿನ್ನಬೇಕು ಅನ್ನುವ ಮೀನು ಪ್ರಿಯರಿಗೆ ರುಚಿ ರುಚಿಯಾದ ತಾಜಾ ಬೂತಾಯಿ ಮೀನು ದೊರಕಿದೆ.
PublicNext
28/01/2025 05:53 pm