ಮುಲ್ಕಿ: ಹಿಂದೂ ಯುವಸೇನೆ ಮುಲ್ಕಿ ಘಟಕ ಹಾಗೂ ಮಹಿಳಾ ಮಂಡಳಿ ವತಿಯಿಂದ ಎರಡನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಮುಲ್ಕಿಯ ಶಿವಾಜಿ ಮಂಟಪದ ಬಳಿ ನಡೆಯಿತು.ಧ್ವಜಾರೋಹಣವನ್ನು ಮುಲ್ಕಿ ನ.ಪಂ. ಮುಖ್ಯಾಧಿಕಾರಿ ಚಂದ್ರ ಪೂಜಾರಿ ನೆರವೇರಿಸಿ ಮಾತನಾಡಿ, ಈಗಿನ ಕಾಲಘಟ್ಟದಲ್ಲಿ ಪರಿಸ್ಥಿತಿಗೆ ತಕ್ಕಂತೆ ಕನ್ನಡ ಭಾಷಾಭಿಮಾನ ಕಡಿಮೆಯಾಗುತ್ತಿದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬ ನಾಣ್ಣುಡಿಯಂತೆ ಕನ್ನಡ ಉಳಿಸುವ ಕೆಲಸ ಆಗಬೇಕು. ಕೊರೊನಾ ಹಾವಳಿಯ ಈ ಸಂದಿಗ್ಧ ಪರಿಸ್ಥಿತಿಯಲ್ಲೂ ರಾಜ್ಯ ಸರಕಾರದ ಕೋವಿಡ್ ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸೋಣ ಎಂದರು.
ಮುಖ್ಯ ಅತಿಥಿಗಳಾಗಿ ಹೊಸ ಅಂಗಣ ಮಾಸಪತ್ರಿಕೆ ಸಂಪಾದಕ ಡಾ. ಹರಿಶ್ಚಂದ್ರ ಸಾಲಿಯಾನ್ ಮಾತನಾಡಿ, ಕನ್ನಡಾಭಿಮಾನದ ಮೂಲಕ ಮುಲ್ಕಿಯ ಹಿಂದೂ ಯುವ ಸೇನೆ ರಾಜ್ಯೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಕನ್ನಡ ಭಾಷೆ ಬಗ್ಗೆ ಸರಕಾರ ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಕನ್ನಡ ಭಾಷೆ ಉಳಿಸಿ, ಬೆಳೆಸುವ ಕೆಲಸ ಆಗಬೇಕು. ಕೇವಲ ಒಂದು ದಿನ ಕನ್ನಡ ರಾಜ್ಯೋತ್ಸವ ಆಚರಿಸಿ ಕನ್ನಡ ನಿಂತ ನೀರಾಗಬಾರದು ಎಂದು ಕಿವಿಮಾತು ಹೇಳಿದರು. ಮುಖ್ಯಅತಿಥಿಗಳಾಗಿ ಡಾ. ಅಚ್ಯುತ ಕುಡ್ವ ,ಉದ್ಯಮಿ ಶಶಿಕಾಂತ ಕೋಟ್ಯಾನ್, ಹಿಂದೂ ಯುವಸೇನೆ ಮುಲ್ಕಿ ಘಟಕದ ಅಧ್ಯಕ್ಷ ಅಶ್ವಥ್ ಕೊಲಕಾಡಿ ಮುಲ್ಕಿ ನ.ಪಂ. ಸದಸ್ಯರಾದ ದಯಾವತಿ ಅಂಚನ್, ಮುಲ್ಕಿ ಹಿಂದೂ ಯುವಸೇನೆ ಪ್ರಧಾನ ಕಾರ್ಯದರ್ಶಿ ನಿತಿನ್ ದೇವಾಡಿಗ, ಕೋಶಾಧಿಕಾರಿ ಸತೀಶ್ ಬಂಗೇರ, ಮಹಿಳಾ ಮಂಡಳಿ ಅಧ್ಯಕ್ಷರಾದ ನೀರಜಾ ಅಗರ್ವಾಲ್, ಉಪಾಧ್ಯಕ್ಷೆ ಲತಾ ಶೇಖರ್, ದಿನೇಶ್ ಕೊಲ್ನಾಡು ಉಪಸ್ಥಿತರಿದ್ದರು.
Kshetra Samachara
01/11/2020 11:16 am