ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪೊಲೀಸ್ ಹುತಾತ್ಮರ ದಿನಾಚರಣೆ; ಹುತಾತ್ಮರಾದ ಸಾಹಸಿ ಪೊಲೀಸರ ಸಂಸ್ಮರಣೆ

ಉಡುಪಿ: ಇಂದು ಉಡುಪಿಯ ಜಿಲ್ಲಾ ಪರೇಡ್ ಮೈದಾನದಲ್ಲಿ ಕರ್ತವ್ಯ ಪಾಲನೆ ಸಂದರ್ಭ ಪ್ರಾಣ ಸಮರ್ಪಿಸಿದ ಪೊಲೀಸ್ ಹುತಾತ್ಮರ ದಿನಾಚರಣೆ ನಡೆಯಿತು.ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಅಧಿಕಾರಿಗಳು, ಪತ್ರಕರ್ತರು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಮಾಜ ಸೇವಕರು, ಮಾಜಿ ಸೈನಿಕರು ಪುಷ್ಪಗುಚ್ಛ ಅರ್ಪಿಸಿದರು. ಪೊಲೀಸ್ ಹುತಾತ್ಮರ ಗೌರವ ಸೂಚಕವಾಗಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ ನಂತರ ಮೌನಾಚರಣೆ ಮಾಡಲಾಯಿತು.

ಪೊಲೀಸರ ಕರ್ತವ್ಯ ನಿಷ್ಠೆಯಿಂದಾಗಿ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತ, ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.ಎಂತಹ ಕಷ್ಟದ ಸಂದರ್ಭದಲ್ಲೂ ಪ್ರತಿಯೊಬ್ಬರು ಮೊದಲಿಗೆ ನೆನಪಿಸುವುದು ಪೊಲೀಸರನ್ನು. ಎಂತಹ ಕಷ್ಟದ ಕೆಲಸವನ್ನೂ ಹೆದರದೆ ನಿರ್ವಹಿಸುವ ಪೊಲೀಸರ ಸೇವೆ ಅನನ್ಯ. ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸಂದರ್ಭ ಪೊಲೀಸರು ಜಿಲ್ಲೆಯ ಗಡಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದುದರ ಪರಿಣಾಮ ವಿಪರೀತ ಮಟ್ಟಕ್ಕೆ ಹೋಗುವುದನ್ನು ತಪ್ಪಿಸಿದ್ದು ಇಲಾಖೆಯ ಕರ್ತವ್ಯಪ್ರಜ್ಞೆಯೊಂದಿಗೆ ಜಿಲ್ಲೆಯನ್ನು ಸೇಫ್ ಇರುವಂತೆ ನೋಡಿಕೊಂಡಿದ್ದಾರೆ. ಅಲ್ಲದೆ, ಇತ್ತೀಚೆಗೆ ಬಂದ ಮಹಾ ಮಳೆಯ ಸಂದರ್ಭದಲ್ಲಿ ಕೂಡ ಜೀವದ ಹಂಗು ತೊರೆದು ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಜಿಲ್ಲೆಯಲ್ಲಿ ಯಾವುದೇ ರೀತಿಯ ಸಾವು- ನೋವು ಉಂಟಾಗದಂತೆ ಸೇವೆ ಮಾಡಿದ್ದಾರೆ ಎಂದರು.

Edited By : Manjunath H D
Kshetra Samachara

Kshetra Samachara

21/10/2020 05:46 pm

Cinque Terre

20.25 K

Cinque Terre

1

ಸಂಬಂಧಿತ ಸುದ್ದಿ