ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿ.ಸಿ.ರೋಡ್ : ಲಯನ್ಸ್ ಕ್ಲಬ್ ಪ್ರಾಂತೀಯ ಸಮ್ಮೇಳನ " ಪುನರ್ ಜನ್ಮ " ಮನವಿ ಪತ್ರ ಬಿಡುಗಡೆ

ಬಂಟ್ವಾಳ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317 ಡಿ, ಪ್ರಾಂತ್ಯ 2 ರ ಪ್ರಾಂತೀಯ ಸಮ್ಮೇಳನ ಪುನರ್ ಜನ್ಮ ಕಾರ್ಯಕ್ರಮದ ಮನವಿ ಪತ್ರ ಬಿಡುಗಡೆ ಮತ್ತು ಸೇವಾ ಕಾರ್ಯಕ್ರಮ ಶೈತ್ಯಾಗಾರ ನಿರ್ಮಾಣಕ್ಕೆ ಮುಂಗಡ ಮೊಬಲಗು ಪಾವತಿ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮನವಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಮೊಡಂಕಾಪು ಚರ್ಚಿನ ಧರ್ಮಗುರು ವಲೇರಿಯನ್ ಡಿಸೋಜ, ಲಯನ್ಸ್ ಕ್ಲಬ್ ಸಮಾಜಮುಖಿ ಸೇವಾ ಚಟುವಟಿಕೆಗಳಿಂದಲೇ ಗುರುತಿಸಿಕೊಂಡಿದೆ. ಇದೀಗ ಪ್ರಾಂತೀಯ ಸಮ್ಮೇಳನದ ಜೊತೆಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಬಡಜನರಿಗಾಗಿ ಉಚಿತ ಶೈತ್ಯಾಗಾರ ಅಳವಡಿಸಲು ಮುಂದಾಗಿರುವುದು ಸ್ತುತ್ಯರ್ಹ ಎಂದರು.

ಇದೇ ವೇಳೆ ಶೈತ್ಯಾಗಾರ ನಿರ್ಮಾಣಕ್ಕೆ 1.5 ಲಕ್ಷ ರೂ. ಮೊತ್ತದ ಮುಂಗಡ ಚೆಕ್ ಹಸ್ತಾಂತರಿಸಲಾಯಿತು.

ಪ್ರಾಂತೀಯ ಅಧ್ಯಕ್ಷ ಸಂಜೀವ ಶೆಟ್ಟಿ ಮಾತನಾಡಿ, ಶೈತ್ಯಾಗಾರದ ಪರಿಕಲ್ಪನೆಗೆ ಲಯನ್ಸ್ ಸದಸ್ಯರು ಉತ್ತಮವಾಗಿ ಸ್ಪಂದಿಸಿರುವುದು ಖುಷಿ ವಿಚಾರ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಕೃಷ್ಣ ಶ್ಯಾಮ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತೀಯ ಸಮ್ಮೇಳನಾಧ್ಯಕ್ಷ ಅಧ್ಯಕ್ಷ ಸತೀಶ್ ಕುಡ್ವ ಉದ್ಘಾಟಿಸಿದರು.

ಲಯನ್ಸ್ ಉಪರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ, ಮಾಜಿ ರಾಜ್ಯಪಾಲ ದೇವದಾಸ ಭಂಡಾರಿ ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಗೆ ಕೊಡುಗೆ ನೀಡಿದ ದಿ. ಅನಂತಕೃಷ್ಣ ಮತ್ತು ಎಪ್ರಿಯಂ ಸಿಕ್ವೇರಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪ್ರಮುಖರಾದ ಡಾ.ವೇಣುಗೋಪಾಲ್, ಜಗದೀಶ ಯಡಪಡಿತ್ತಾಯ, ವಾಲ್ಟರ್ ಡಿಸೋಜ, ಶ್ರೀನಿವಾಸ್ ಪೂಜಾರಿ, ಲಕ್ಷ್ಮಣ್ ಕುಲಾಲ್, ಉಮೇಶ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಡಾ.ದಿವ್ಯ ವಸಂತ್ ಶೆಟ್ಟಿ ಪ್ರಾರ್ಥಿಸಿದರು. ಮಾಜಿ ಪ್ರಾಂತೀಯ ಅಧ್ಯಕ್ಷ ದಾಮೋದರ ಬಿ.ಎಂ.ಪ್ರಾಸ್ತಾವಿಕ ಮಾತನಾಡಿದರು. ಪ್ರಾಂತೀಯ ಅಧ್ಯಕ್ಷ ಸಂಜೀವ ಶೆಟ್ಟಿ ಬಿ.ಸಿ.ರೋಡು ಸ್ವಾಗತಿಸಿ, ವಂದಿಸಿದರು. ಮಾಜಿ ಅಧ್ಯಕ್ಷ ಮಧ್ವರಾಜ್ ಬಿ.ಕಲ್ಮಾಡಿ ಮತ್ತು ಕೋಶಾಧಿಕಾರಿ ಸುನಿಲ್ ಬಿ. ನಿರೂಪಿಸಿದರು.

Edited By : Nagesh Gaonkar
Kshetra Samachara

Kshetra Samachara

18/10/2020 02:44 pm

Cinque Terre

7.81 K

Cinque Terre

0

ಸಂಬಂಧಿತ ಸುದ್ದಿ