ಉಡುಪಿ: ಉಡುಪಿ ನಗರದ ಕೆನರಾ ಜ್ಯುವೆಲ್ಲರಿಗೆ ಗ್ರಾಹಕನ ಸೋಗಿನಲ್ಲಿ ಹೋದ ಕಳ್ಳನೊಬ್ಬ ಉಂಗುರ ಕದ್ದು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೇರಳದ ಕಾಸರಗೋಡಿನ ಸಾಜು ,ಉಂಗುರ ಕದ್ದ ಕಳ್ಳ.
ಈತ ನಗರದ ಕೆನರಾ ಜ್ಯುವೆಲ್ಲರಿಗೆ ಗ್ರಾಹಕನ ಸೋಗಿನಲ್ಲಿ ತೆರಳಿ ಉಂಗುರ ಬೇಕು ಎಂದು ಕೇಳಿದ್ದಾನೆ.ಅದನ್ನು ತೋರಿಸುವಾಗ ಚೈನ್ ತೋರಿಸಿ ಎಂದಿದ್ದಾನೆ. ಜ್ಯುವೆಲ್ಲರಿಯವರು ಚೈನ್ ತೋರಿಸುವಾಗ ಈತ ಉಂಗುರ ಹಿಡಿದುಕೊಂಡು ಓಡಿದ್ದಾನೆ. ಜ್ಯುವೆಲ್ಲರಿಯ ಮಾಲಕ ಸ್ಥಳೀಯರ ನೆರವಿನಿಂದ ಕಳ್ಳನನ್ನು ಬೆನ್ನಟ್ಟಿ ಹಿಡಿದು ಅವನಿಂದ ಉಂಗುರ ವಾಪಾಸು ಪಡೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.
PublicNext
11/10/2022 01:11 pm