ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಾಮಂಜೂರಿನಲ್ಲಿ ಶಾರದೋತ್ಸವ ಬ್ಯಾನರ್‌ಗೆ ಹಾನಿ; ಪ್ರಕರಣ ದಾಖಲು

ಮಂಗಳೂರು: ನಗರದ ಹೊರವಲಯದಲ್ಲಿರುವ ವಾಮಂಜೂರಿನಲ್ಲಿ ಶಾರದೋತ್ಸವ ಬ್ಯಾನರ್‌ಗೆ ಹಾನಿ ಮಾಡುವ ಮೂಲಕ ದ.ಕ ಜಿಲ್ಲೆಯಲ್ಲಿ ಮತ್ತೆ ಅಶಾಂತಿ ಸೃಷ್ಟಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ತಡರಾತ್ರಿ 1.30 ರಿಂದ2 ಗಂಟೆ ನಡುವೆ ಈ ಕೃತ್ಯವನ್ನು ದುಷ್ಕರ್ಮಿಗಳು ಎಸಗಿದ್ದಾರೆಂದು ದೂರಲಾಗಿದೆ. ಸ್ಥಳೀಯ ಹಿಂದೂ ಯುವಕರ ತಂಡವೊಂದು ಬ್ಯಾನರ್ ಹಾನಿಗೊಳಿಸಿದೆ ಎಂದು ಹೇಳಲಾಗಿದೆ. ಈ ವೇಳೆ 10ಕ್ಕೂ ಅಧಿಕ ಬ್ಯಾನರ್ ಗಳಿಗೆ ಹಾನಿಯಾಗಿದೆ.

ಬ್ಯಾನರ್‌ಗೆ ಹಾನಿ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಬಗ್ಗೆ ವಾಮಂಜೂರಿನ ಹುಲಿವೇಷ ತಂಡವು ಠಾಣೆಗೆ ದೂರು ನೀಡಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
Kshetra Samachara

Kshetra Samachara

09/10/2022 12:58 pm

Cinque Terre

12.31 K

Cinque Terre

1