ಉಡುಪಿ: ವಿದೇಶದಲ್ಲಿ ಡಾಕ್ಟರ್ ಎಂದು ಪರಿಚಯಿಸಿಕೊಂಡು ಗಿಫ್ಟ್ ಕಳಿಸುವುದಾಗಿ ನಂಬಿಸಿ ಚಾಂತಾರುವಿನ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ಬರೋಬ್ಬರಿ 16.89 ಲಕ್ಷ ರೂ.ವಂಚಿಸಿದ್ದು, ಈ ಬಗ್ಗೆ ಸೆನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಾಂತಾರು ನಿವಾಸಿ ಲವೀನಾ ಜೆನಿಫರ್ ಮೊರಾಸ್ ಎಂಬವರಿಗೆ ಇನ್ ಸ್ಟಾಗ್ರಾಮ್ ನಲ್ಲಿ ಜೋವನ್ ಎಂಬ ವ್ಯಕ್ತಿಯ ಪರಿಚಯವಾಗಿದ್ದು ಆತ ತಾನು ಕೆನಡಾದಲ್ಲಿ ಡಾಕ್ಟರ್ ಎಂಬುದಾಗಿ ಹೇಳಿಕೊಂಡಿದ್ದಾನೆ. ಬಳಿಕ ಇಬ್ಬರು ವಾಟ್ಸಾಪ್ ಮೂಲಕ ಮಾತುಕತೆ ನಡೆಸಿ ಸ್ನೇಹಿತರಾಗಿದ್ದು, ಅ.2 ರಂದು ಆತನು ಐಫೋನ್, ಚಿನ್ನ ಹಾಗೂ ಯುಎಸ್ ಡಾಲರ್ ನ್ನು ಪಾರ್ಸೆಲ್ ಕಳುಹಿಸುವುದಾಗಿ ನಂಬಿಸಿದ್ದಾನೆ. ಆ ಬಳಿಕ ಕಸ್ಟಮ್ಸ್ ಅಧಿಕಾರಿ ಎಂದು ಮೊ. 9233013312 ನೇ ನಂಬರ್ ನಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ಕೆನಡಾದಿಂದ ಬಂದಿರುವ ಪಾರ್ಸೆಲ್ ಗೆ ಪಾರ್ಸೆಲ್ ಚಾರ್ಜ್, ಮನಿ ಲ್ಯಾಂಡಿಂಗ್ ಸರ್ಟಿಫಿಕೇಟ್ ಪಡೆಯಲು ಹಣ ಪಾವತಿಸಬೇಕು ಎಂದು ತಿಳಿಸಿದ್ದು, ಇದನ್ನು ನಂಬಿದ ಲವೀನಾ ಅವರು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂ.16,89,862 ಹಣವನ್ನು ಪಾವತಿಸಿದ್ದರು. ಆದರೆ ಆ ಬಳಿಕ ಯಾವುದೇ ಪಾರ್ಸೆಲ್ ಬಾದರೇ ಇದ್ದು ತಾವು ಮೋಸ ಹೋಗಿರುವುದು ತಿಳಿದು ಬಂದಿದೆ. ಅದರಂತೆ ಲವೀನಾ ಅವರಿಗೆ ವಿದೇಶದಲ್ಲಿ ಡಾಕ್ಟರ್ ಎಂದು ಪರಿಚಯಿಸಿಕೊಂಡು ಪಾರ್ಸೆಲ್ ಗಿಫ್ಟ್ ಕಳಿಸುವುದಾಗಿ ನಂಬಿಸಿ ಕಸ್ಟಮ್ಸ್ ಅಧಿಕಾರಿಯ ಸೋಗಿನಲ್ಲಿ ಹಣ ಪಡೆದು ವಂಚಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
08/10/2022 09:55 pm